ಗುವಾಹಟಿ(ಅಸ್ಸೋಂ): ನಮ್ಮ ದೇಶದಲ್ಲಿ ಬಹುತೇಕರು ಪಾನಿಪುರಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಬಾರಿ ಪಾನಿಪುರಿ ಸವಿಯುತ್ತಿರುವುದು ಆನೆ. ಹೌದು, ಅಚ್ಚರಿ ಪಡುವ ಸಂಗತಿ. ಅಸ್ಸೋಂನ ತೇಜ್‌ಪುರದಲ್ಲಿ ಆನೆಯೊಂದು ರಸ್ತೆ ಬದಿಯ ಸ್ಟಾಲ್‌ನಲ್ಲಿ ಪಾನಿಪುರಿ ತಿನ್ನುತ್ತಿದೆ. ಆನೆ ಪಾನಿಪುರಿ ತಿನ್ನುತ್ತ ಎಂಜಾಯ್ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗ್ತಿದೆ.
ನಮ್ಮ ದೇಶದಲ್ಲಿ ವಿಶೇಷವಾಗಿ ಪಾನಿಪುರಿ ತಿನ್ನುವುದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಆನೆಗೆ ಬೆಳಗಿನ ಉಪಾಹಾರವನ್ನು ತಯಾರಿಸಿ ಪ್ರೀತಿಯಿಂದ ಉಣಿಸುವ ಮಾರಾಟಗಾರನು ಸಹ ಆನಂದಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಪರೂಪದ ಮತ್ತು ಅದ್ಭುತ ದೃಶ್ಯವನ್ನು ನೋಡಿದ ಅನೇಕ ಜನರು ವಿಡಿಯೋ ರೆಕಾರ್ಡ್ ಮಾಡಲು ಸ್ಟಾಲ್ ಸುತ್ತ ಜಮಾಯಿಸಿದ್ದರು. ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.