ಕರ್ನಾಟಕ

karnataka

ETV Bharat / bharat

ತ್ರಿಶೂರ್​​ ಪೂರಂ ಹಬ್ಬದ ಮೆರವಣಿಗೆಯಲ್ಲಿ ರೊಚ್ಚಿಗೆದ್ದು ಓಡಿದ ಆನೆ - ಮಚಟ್​ ಧರ್ಮನ್​ ಆನೆ

ಪೂರಂ ಹಬ್ಬದ ಮೆರವಣಿಗೆಗೆಂದು ಕರೆತಂದಿದ್ದ ಆನೆಯೊಂದು ಮೆರವಣಿಗೆ ವೇಳೆ ರೊಚ್ಚಿಗೆದ್ದು, ಅಡ್ಡಾದಿಡ್ಡಿ ಓಡಿದೆ. ಈ ವೇಳೆ ಹೆಚ್ಚು ಜನರು ಅಲ್ಲಿರದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

Elephant runs amok during Pooram festival
ತ್ರಿಶೂರ್​​ ಪೂರಂ ಹಬ್ಬದ ಮೆರವಣಿಗೆಯಲ್ಲಿ ರೊಚ್ಚಿಗೆದ್ದು ಓಡಿದ ಆನೆ

By

Published : May 10, 2022, 4:13 PM IST

ತ್ರಿಶೂರ್(ಕೇರಳ):ತ್ರಿಶೂರ್ ಪೂರಂ ಹಬ್ಬಕ್ಕೆಂದು ಕರೆತಂದಿದ್ದ ಆನೆಯೊಂದು ಏಕಾಏಕಿ ಓಡಲು ಪ್ರಾರಂಭಿಸಿದ್ದು, ನೆರೆದಿದ್ದ ಸಾವಿರಾರು ಜನರನ್ನು ಭಯಭೀತರನ್ನಾಗಿಸಿದ ಘಟನೆ ನಡೆದಿದೆ. ಹೆಚ್ಚು ಜನರು ಜಮಾಯಿಸಿದ್ದ ಮುಖ್ಯ ದೇವಾಲಯದ ಆವರಣದ ಹೊರಗೆ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್​​ ಯಾವುದೇ ಅಪಾಯ ಸಂಭವಿಸಿಲ್ಲ.

ಪೂರಂ ಪ್ರಕ್ರಿಯೆ ಆರಂಭಿಸಲು ಕಣಿಮಂಗಲಂ ಶಾಸ್ತವ್‌ರ ಮೆರವಣಿಗೆಯೊಂದಿಗೆ ತೆರಳಲು ಮಚಟ್​ ಧರ್ಮನ್​ ಎಂಬ ಆನೆಯನ್ನು ಕರೆತರಲಾಗಿತ್ತು. ಆನೆ ಮಣಿಕಂದನಾಲು ಬಳಿ ತಲುಪುತ್ತಿದ್ದಂತೆ ರೊಚ್ಚಿಗೆದ್ದು ಓಡಲು ಪ್ರಾರಂಭಿಸಿದೆ. ಆದರೆ ಆನೆಯಿಂದ ಯಾವುದೇ ವಸ್ತುಗಳಿಗೆ ಹಾನಿಯಾಗಿಲ್ಲ. ಯಾರ ಮೇಲೂ ಅದು ದಾಳಿ ಮಾಡಿಲ್ಲ ಎಂದು ತಿಳಿದುಬಂದಿದೆ.

ತ್ರಿಶೂರ್​​ ಪೂರಂ ಹಬ್ಬದ ಮೆರವಣಿಗೆಯಲ್ಲಿ ರೊಚ್ಚಿಗೆದ್ದು ಓಡಿದ ಆನೆ

ಈ ಜಾಗದಲ್ಲಿ ಜನ ಕಡಿಮೆ ಇದ್ದರು. ತಕ್ಷಣವೇ ಸುರಕ್ಷಿತ ಜಾಗಕ್ಕೆ ತೆರಳಿ ಪಾರಾಗಿದ್ದಾರೆ. ನಂತರ ಆನೆ ದಳ ಸ್ಥಳಕ್ಕೆ ಆಗಮಿಸಿ ಸಲಗವನ್ನು ನಿಯಂತ್ರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿಡಿಯೋ ನೋಡಿ: ಪೊಲೀಸ್ ತಂಡದ ಮೇಲೆ ಚಿರತೆ ಅಟ್ಯಾಕ್; ರಕ್ಷಕರ ಧೈರ್ಯ ಮೆಚ್ಚಲೇಬೇಕು!

ABOUT THE AUTHOR

...view details