ಕರ್ನಾಟಕ

karnataka

ETV Bharat / bharat

ಮಡಿದ ಮಾವುತನಿಗೆ ಗಜರಾಜನ ಅಂತಿಮ ವಿದಾಯ... ವಿಡಿಯೋ ನೋಡಿ - ಪ್ರೀತಿಯ ಮಾವುತನಿಗೆ ಆನೆಯ ಗೌರವಯುತ ವಿದಾಯ

ತನ್ನನ್ನು ಸಲುಹಿದ ಮಾವುತನಿಗೆ ಆನೆ ಅಂತಿಮ ನಮನ ಸಲ್ಲಿಸಿದ್ದು, ಈ ದೃಶ್ಯ ಎಂತವರ ಮನಸನ್ನೂ ಕರಗುವಂತಿದೆ.

ಕಣ್ಮುಚ್ಚಿದ ಮಾವುತನಿಗೆ ಗಜರಾಜನ ಗೌರವಯುತ ವಿದಾಯ
ಕಣ್ಮುಚ್ಚಿದ ಮಾವುತನಿಗೆ ಗಜರಾಜನ ಗೌರವಯುತ ವಿದಾಯ

By

Published : Jun 5, 2021, 1:34 PM IST

ಕೊಟ್ಟಾಯಂ (ಕೇರಳ): 60 ವರ್ಷಗಳಿಗೂ ಹೆಚ್ಚು ಕಾಲ ಆನೆಗಳ ಆರೈಕೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದ ಕೊಟ್ಟಾಯಂನ ಕೊರೊಪಾಡ ಮೂಲದ ದಾಮೋದರನ್ ನಾಯರ್ ತೀರಿಕೊಂಡಿದ್ದಾರೆ.

ಕಣ್ಮುಚ್ಚಿದ ಮಾವುತನಿಗೆ ಗಜರಾಜನ ಗೌರವಯುತ ವಿದಾಯ

74 ವರ್ಷದ ದಾಮೋದರನ್ ನಾಯರ್ ಅಕಾ ಒಮಾನಾ ಚೆಟ್ಟನ್ ಕಳೆದ 25 ವರ್ಷಗಳಿಂದ 'ಪಲ್ಲತ್ ಬ್ರಹ್ಮದಾನ್' ಎಂಬ ಆನೆಯ ಮಾವುತರಾಗಿದ್ದರು. ಅವರ ನಿಧನದ ಬಳಿಕ ಅಂತಿಮ ವಿಧಿಗಳಿಗೆ ಮುಂಚಿತವಾಗಿ ಒಮಾನಾ ಚೆಟ್ಟನ್ ಅವರ ಅಂತಿಮ ದರ್ಶನ ಪಡೆಯಲು ಹಾಜರಿದ್ದ ಬ್ರಹ್ಮದಾನ್, ಅಂತಿಮ ವಂದನೆ ಸಲ್ಲಿಸುವ ಮೂಲಕ ತನ್ನ ಪ್ರೀತಿಯ ಮಾವುತನಿಗೆ ಗೌರವ ಸಲ್ಲಿಸಿದೆ.

ಮಾವುತ ಮತ್ತು ಆನೆ

ಓಮನಾ ಚೆಟ್ಟನ್ ಮತ್ತು ಬ್ರಹ್ಮದಾನ್ ಪ್ರಸಿದ್ಧ ತ್ರಿಶೂರ್ ಪೂರಂ, ಕೂಡಲ್ಮಣಿಕ್ಯಂ, ಅರಟ್ಟುಪುಳ ಉತ್ಸವ ಇತ್ಯಾದಿಗಳಲ್ಲಿ ಭಾಗವಹಿಸಿ ಹೆಸರುವಾಸಿಯಾಗಿದ್ದರು. ಹಲವಾರು ಪ್ರಶಸ್ತಿಗಳನ್ನು ಗೆದ್ದ ಮಾವುತ ದಾಮೋದರನ್ ನಾಯರ್ ಅನೇಕ ಜನರಿಗೆ ಆನೆ ಆರೈಕೆಯ ಕಲೆಯ ತರಬೇತಿ ನೀಡಿದ್ದರು.

ABOUT THE AUTHOR

...view details