ಧೆಂಕನಲ್(ಒಡಿಶಾ):ಹೊಂಡದಲ್ಲಿ ಬಿದ್ದ ಆನೆವೊಂದನ್ನ ಬರೋಬ್ಬರಿ ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ, ರಕ್ಷಣೆ ಮಾಡಿರುವ ಘಟನೆ ಒಡಿಶಾದ ಧೆಂಕನಲ್ನಲ್ಲಿ ನಡೆದಿದೆ.
ಇಲ್ಲಿನ ಹಿಂದೋಲ್ ಅರಣ್ಯ ಪ್ರದೇಶದ ಖಾಲಿಬೋರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನೀರು ತುಂಬಿದ್ದ ಹೊಂಡಕ್ಕೆ ಆನೆ ಬಿದ್ದಿರುವ ಕಾರಣ, ಮೇಲೆ ಬರಲು ಸಾಧ್ಯವಾಗದೇ ಕಷ್ಟಪಟ್ಟಿದೆ. ಈ ವೇಳೆ ಗ್ರಾಮಸ್ಥರು ಅರಣ್ಯಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕದ ದಳದ ಸಿಬ್ಬಂದಿ, ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿ, ಅದನ್ನ ಸುರಕ್ಷಿತವಾಗಿ ಹೊರಗೆ ತಗೆದಿದ್ದಾರೆ.