ಚಿತ್ತೂರು (ಆಂಧ್ರಪ್ರದೇಶ): ಚಿತ್ತೂರು ಜಿಲ್ಲೆಯ ಪಾಲಮನೇರು ಗ್ರಾಮೀಣ ಮಂಡಲದ ಕೋತಿಗುಟ್ಟ ಪ್ರದೇಶದಲ್ಲಿ ಆನೆಯೊಂದು ವಿದ್ಯುತ್ ಶಾಕ್ನಿಂದ ಮೃತಪಟ್ಟಿದೆ. ತನ್ನ ಹಿಂಡಿನಿಂದ ಹೊರಬಂದ ಆನೆ ಕೃಷಿ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಮೈ ಉಜ್ಜಿದ ಪರಿಣಾಮ ಶಾಕ್ ತಗುಲಿ ಸಾವನ್ನಪ್ಪಿದೆ ಎನ್ನಲಾಗಿದೆ.
ವಿದ್ಯುತ್ ಕಂಬಕ್ಕೆ ಮೈ ಉಜ್ಜಿದ ಆನೆ: ಕರೆಂಟ್ ಶಾಕ್ ತಗುಲಿ ಸಾವು - elephant dies in chittur district
ಚಿತ್ತೂರು ಜಿಲ್ಲೆಯ ಪಾಲಮನೇರು ಗ್ರಾಮೀಣ ಮಂಡಲದ ಕೋತಿಗುಟ್ಟ ಪ್ರದೇಶದಲ್ಲಿ ಆನೆಯೊಂದು ವಿದ್ಯುತ್ ಶಾಕ್ನಿಂದ ಮೃತಪಟ್ಟಿದೆ.
ವಿದ್ಯುತ್ ತಗುಲಿ ಆನೆ ಸಾವು
ಇನ್ನು ವಿದ್ಯುತ್ ಕಂಬ ಮುರಿದು ಕೆಳಗೆ ಬಿದ್ದಿದ್ದು, ಎಲ್ಲಾ ವಿದ್ಯುತ್ ತಂತಿಗಳು ಆನೆಯ ಮೇಲೆ ಬಿದ್ದು ಆನೆ ಸಾವನ್ನಪ್ಪಿದೆ. ಘಟನೆಯ ಬಗ್ಗೆ ತಿಳಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.