ಇಡುಕ್ಕಿ(ಕೇರಳ):ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಹೀಗಾಗಿ, ಸುಮಾರು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿತ್ತು. ಮಂಗಳವಾರ ನಸುಕಿನ ಜಾವ ಈ ಘಟನೆ ನಡೆದಿದೆ.
ಹೆಣ್ಣು ಆನೆ ನಡು ರಸ್ತೆಯಲ್ಲೇ ಮರಿಗೆ ಜನ್ಮ ನೀಡುತ್ತಿದ್ದಂತೆ ಮಾರಾಯೂರ್ - ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು. ಹೀಗಾಗಿ, ಎರಡು ಬದಿ ರಸ್ತೆ ಸಂಚಾರ ಬಂದ್ ಆಗಿತ್ತೆಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.