ಕರ್ನಾಟಕ

karnataka

ETV Bharat / bharat

ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ಯಾಕೇಜಿಂಗ್‌ ಮೇಲೆ QR Code ಕಡ್ಡಾಯಗೊಳಿಸಿದ ಸರ್ಕಾರ - ಗ್ರಾಹಕ ವ್ಯವಹಾರಗಳು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಈ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯನ್ನು ಸಕ್ರಿಯಗೊಳಿಸಲು QR Code ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಎಲೆಕ್ಟ್ರಾನಿಕ್ ಸರಕುಗಳ ಪ್ಯಾಕೇಜಿಂಗ್‌ನಲ್ಲಿ ಕ್ಯೂಆರ್ ಕೋಡ್
ಎಲೆಕ್ಟ್ರಾನಿಕ್ ಸರಕುಗಳ ಪ್ಯಾಕೇಜಿಂಗ್‌ನಲ್ಲಿ ಕ್ಯೂಆರ್ ಕೋಡ್

By

Published : Jul 17, 2022, 4:18 PM IST

ನವದೆಹಲಿ: ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ಯಾಕೇಜಿಂಗ್ ಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಎಲೆಕ್ಟ್ರಾನಿಕ್ ಸರಕುಗಳ ಪ್ಯಾಕೇಜಿಂಗ್‌ನಲ್ಲಿ ಕ್ಯೂಆರ್ ಕೋಡ್ ಅನ್ನು ಕಡ್ಡಾಯಗೊಳಿಸಿದ್ದು, ಜುಲೈ 15 ರಂದು ಅಥವಾ ನಂತರ ತಯಾರಿಸಿದ ಉತ್ಪನ್ನಗಳಿಗೆ ಒಂದು ವರ್ಷದವರೆಗೆ QR ಕೋಡ್ ಕಡ್ಡಾಯವಾಗಿರುತ್ತದೆ.

ಹೊಸ ನಿಯಮದ ಪ್ರಕಾರ ಎಲೆಕ್ಟ್ರಾನಿಕ್ ಉತ್ಪನ್ನಗಳ ಪ್ಯಾಕೇಜಿಂಗ್‌ನಲ್ಲಿ ಕ್ಯೂಆರ್ ಕೋಡ್ ನಮೂದಿಸದಿದ್ದರೆ, ಪ್ಯಾಕೇಜಿಂಗ್‌ನಲ್ಲಿಯೇ ಎಲ್ಲಾ ಮಾಹಿತಿಯನ್ನು ನೀಡಬೇಕಾಗುತ್ತದೆ. ಈ ತಿದ್ದುಪಡಿಯು ಉದ್ಯಮ ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ರೂಪದಲ್ಲಿ ಹೆಚ್ಚಿನ ಮಾಹಿತಿಯನ್ನು ಘೋಷಿಸಲು ಅನುವು ಮಾಡಿಕೊಡುತ್ತದೆ.

ತಂತ್ರಜ್ಞಾನದ ಹೆಚ್ಚಿನ ಬಳಕೆ:ಈ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆಯನ್ನು ಸಕ್ರಿಯಗೊಳಿಸಲು ಇದನ್ನು ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಕ್ಯೂಆರ್​ ಕೋಡ್‌ಗಳ ಮೂಲಕ ಪ್ರದರ್ಶಿಸಬಹುದಾದ ಮಾಹಿತಿ ಎಂದರೆ ತಯಾರಕರ ಅಥವಾ ಪ್ಯಾಕರ್ ಅಥವಾ ಆಮದುದಾರರ ವಿಳಾಸ, ಸರಕುಗಳ ಹೆಸರು, ಸರಕುಗಳ ಗಾತ್ರ ಮತ್ತು ಆಯಾಮ ಮತ್ತು ಗ್ರಾಹಕ ಆರೈಕೆ ವಿವರಗಳಂತಹ ಮಾಹಿತಿಯನ್ನು ಇದು ಒಳಗೊಂಡಿರುತ್ತದೆ.

ಈ ಹಿಂದೆ ಜಾರಿಗೆ ತಂದಿದ್ದ ಆದೇಶದ ಪ್ರಕಾರ, ಎಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಎಲ್ಲಾ ಪೂರ್ವ ಪ್ಯಾಕೇಜ್ ಮಾಡಿದ ಸರಕುಗಳು ಪ್ಯಾಕೇಜ್‌ನ ಲೇಬಲ್‌ನಲ್ಲಿ ಎಲ್ಲಾ ರೀತಿಯ ಕಡ್ಡಾಯ ಘೋಷಣೆಗಳನ್ನು ಉಲ್ಲೇಖಿಸಬೇಕು ಎಂದು ತಿಳಿಸಲಾಗಿತ್ತು. ಈಗ ಈ ಕೋಡ್​ ಬಳಕೆಯಿಂದ ಹೆಚ್ಚಿನ ಅನುಕೂಲ ಆಗಲಿದೆ.

ಇದನ್ನೂ ಓದಿ: ಒಳಹರಿವು ಹೆಚ್ಚಳ.. ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ಇಂದಿನ ನೀರಿನ ಮಟ್ಟ

For All Latest Updates

TAGGED:

ABOUT THE AUTHOR

...view details