ಕಡಪ, ಆಂಧ್ರಪ್ರದೇಶ:ವಿವಿಧ ಘಟನೆಯಲ್ಲಿ ವಿದ್ಯುತ್ ಶಾಕ್ನಿಂದಾಗಿ ಶಾಲಾ ಬಾಲಕ ಮತ್ತು ಸಹೋದರರು ಸೇರಿ ಒಟ್ಟು ಐವರು ಪ್ರಾಣ ಬಿಟ್ಟಿರುವ ದುರಂತ ಘಟನೆ ಶುಕ್ರವಾರ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ವಿದ್ಯುತ್ ತಂತಿಗೆ ವಿದ್ಯಾರ್ಥಿ ಬಲಿ: ವೈಎಸ್‌ಆರ್ ಜಿಲ್ಲೆಯ ಹೊಲಗಳಲ್ಲಿ ವಿದ್ಯುತ್ ತಂತಿಗಳು ನಾಲ್ವರು ಭತ್ತದ ರೈತರನ್ನು ಬಲಿ ಪಡೆದಿದೆ. ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಶಾಲೆಯೊಂದರಲ್ಲಿ ಅಜಾಗರೂಕತೆಯಿಂದ ಬಿಟ್ಟ ವಿದ್ಯುತ್ ತಂತಿಯಿಂದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ವೈಎಸ್‌ಆರ್ ಜಿಲ್ಲೆಯಲ್ಲಿ ರೈತರು ಸಾವು:ಜಿಲ್ಲೆಯ ಚಪಾಡು ತಾಲೂಕಿನ ಚಿಯ್ಯಪಾಡು ಮೂಲದ ಪೆದ್ದ ಓಬುಳರೆಡ್ಡಿ (66) ಮತ್ತು ಬಾಲ ಓಬುಳರೆಡ್ಡಿ (57) ಸಹೋದರರು. ಜಮೀನು ಗುತ್ತಿಗೆ ಪಡೆದು ಭತ್ತದ ಕೃಷಿ ಆರಂಭಿಸಿದ್ದರು. ಮತ್ತೋರ್ವ ರೈತ ಬೊಮ್ಮು ಮಲ್ಲಿಕಾರ್ಜುನ್ ರೆಡ್ಡಿ (25) ಅನ್ನು ಬೆಳೆಗೆ ಕೀಟನಾಶಕ ಸಿಂಪಡಿಸಲು ಕರೆದುಕೊಂಡು ಹೋಗಿದ್ದರು. ಕೀಟನಾಶಕ ಹಾಕುವಾಗ ಮಲ್ಲಿಕಾರ್ಜುನ ಹೊಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದಿದ್ದು, ವಿದ್ಯುತ್ ಹರಿದು ಕೆಳಗೆ ಬಿದ್ದಿದ್ದಾರೆ.