ಚಂಡೀಗಢ: ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಾಧ್ಯಮದ ವ್ಯಕ್ತಿಗಳಿಗೆ ಅಂಚೆ ಮತಪತ್ರ ಸೌಲಭ್ಯವನ್ನು ಬಳಸಿಕೊಂಡು ತಮ್ಮ ಹಕ್ಕು ಚಲಾಯಿಸಲು ಅನುಮತಿ ನೀಡಿದೆ ಎಂದು ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊದಲು 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮತದಾರರು, ವಿಕಲಚೇತನ ವ್ಯಕ್ತಿಗಳು (ಶೇ. 40 ಕ್ಕಿಂತ ಹೆಚ್ಚು) ಮತ್ತು COVID-19 ಪಾಸಿಟಿವ್ ರೋಗಿಗಳಿಗೆ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಲು ಆಯೋಗವು ಅವಕಾಶ ನೀಡಿತ್ತು.
ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!
ಪಂಜಾಬ್‌ನ ಪ್ರಸ್ತುತ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮತದಾನದ ದಿನದಂದು ಕರ್ತವ್ಯದಲ್ಲಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳು, ಭಾರತೀಯ ಆಹಾರ ನಿಗಮ, ಆಲ್ ಇಂಡಿಯಾ ರೇಡಿಯೋ, ದೂರದರ್ಶನ, ಅಂಚೆ ಮತ್ತು ಟೆಲಿಗ್ರಾಫ್, ರೈಲ್ವೆ, ಬಿಎಸ್ಎನ್ಎಲ್, ವಿದ್ಯುತ್, ಆರೋಗ್ಯ, ಅಗ್ನಿಶಾಮಕ ಸೇವೆಗಳು ಮತ್ತು ನಾಗರಿಕ ವಿಮಾನಯಾನ ಸೇರಿದಂತೆ ಇತರರು ಅಂದು ತಮ್ಮ ಮೂಲ ಸ್ಥಳಗಳಿಗೆ ಹೋಗಿ ಮತ ಹಾಕಲು ಸಾಧ್ಯವಿಲ್ಲ. ಈ ಕಾರಣಕ್ಕೆ ಅಂಚೆ ಮತದಾನ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ.