ಕರ್ನಾಟಕ

karnataka

ETV Bharat / bharat

ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್​ ಗೆಲುವು.. ದೀದಿಗೆ ಪಿಎಂ ಅಭಿನಂದನೆ, ಕೇಂದ್ರದಿಂದ ಬೆಂಬಲದ ಭರವಸೆ - ಪಶ್ಚಿಮ ಬಂಗಾಳ ಚುನಾವಣೆ 2021

ತೃಣಮೂಲ ಕಾಂಗ್ರೆಸ್​ ಪಶ್ಚಿಮ ಬಂಗಾಳದಲ್ಲಿ ಹ್ಯಾಟ್ರಿಕ್​ ಜಯ ಸಾಧಿಸಿದೆ. ಸಿಎಂ ಮಮತಾ ಬ್ಯಾನರ್ಜಿ ಪರ ಮತದಾರರು ಜೈಕಾರ ಹಾಕಿದ್ದು, ಮತ್ತೊಂದು ಅವಧಿಗೆ ಟಿಎಂಸಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಅವಕಾಶ ನೀಡಿದ್ದಾರೆ.

PM Congratulates Mamata
PM Congratulates Mamata

By

Published : May 2, 2021, 9:18 PM IST

ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್​ ಜಯದೊಂದಿಗೆ ಇನ್ನೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.

294 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​​ 216 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.

ಅಭಿನಂದನೆ ಸಲ್ಲಿಸಿ ನಮೋ ಟ್ವೀಟ್​

ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಮಮತಾ ದೀದಿಗೆ ಅಭಿನಂದನೆಗಳು. ಬಂಗಾಳಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದ್ದು, ಕೋವಿಡ್​ ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದಾರೆ. ಇದರ ಜೊತೆಗೆ ನಮ್ಮ ಪಕ್ಷವನ್ನ ಆಶೀರ್ವದಿಸಿದ ಪಶ್ಚಿಮ ಬಂಗಾಳದ ನನ್ನ ಸಹೋದರ, ಸಹೋದರಿಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಬಿಜೆಪಿ ಈ ಸಲ ಗಮನಾರ್ಹ ಯಶಸ್ಸು ಕಂಡಿದ್ದು, ಬಿಜೆಪಿ ಜನರ ಸೇವೆ ಸಲ್ಲಿಸುತ್ತಲೇ ಇರುತ್ತದೆ. ಮತದಾರರ ಉತ್ಸಾಹ ಭರಿತ ಪ್ರಯತ್ನ ಹಾಗೂ ಪ್ರತಿ ಕಾರ್ಯಕರ್ತರಿಗೆ ನನ್ನ ಅಭಿನಂದನೆ ಎಂದಿದ್ದಾರೆ.

ಇದರ ಜತೆಗೆ ಕೇರಳದಲ್ಲಿ ಗೆಲುವು ಸಾಧಿಸಿರುವ ಪಿಣರಾಯಿ ವಿಜಯನ್​ ಹಾಗೂ ತಮಿಳುನಾಡಿನಲ್ಲಿನ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಹಾಗೂ ಉತ್ತರ ಪ್ರದೇಶ ಅಖಿಲೇಶ್​ ಯಾದವ್​ ಮಮತಾ ಬ್ಯಾನರ್ಜಿಗೆ ವಿಶ್​ ಮಾಡಿದ್ದು, ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ಅಭಿನಂದನೆಗಳು ಎಂದಿದ್ದಾರೆ.

ABOUT THE AUTHOR

...view details