ಕರ್ನಾಟಕ

karnataka

ETV Bharat / bharat

ಸಚಿವರ ಸಂಬಂಧಿ ಮನೆ ಮೇಲೆ ಐಟಿ ದಾಳಿ: 11 ಕೋಟಿ ರೂ ಜಪ್ತಿ - ಎಐಎಡಿಎಂಕೆ ಸಚಿವರ ಸಂಬಂಧಿ ಇಲೋಂಗವನ್ ಮನೆ ಮೇಲೆ ಐಟಿ ದಾಳಿ

ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಚೆನ್ನೈನಲ್ಲಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಸಿ.ಸಂಪತ್ ಅವರ ಸಂಬಂಧಿ ಇಳಂಗೋವನ್ ಅವರ ಮನೆ ಮೇಲೆ ದಾಳಿ ನಡೆಸಿದೆ.

Chennai
ಐಟಿ ದಾಳಿ

By

Published : Mar 30, 2021, 6:27 AM IST

ತಮಿಳುನಾಡು: ಆದಾಯ ತೆರಿಗೆ ಇಲಾಖೆಯ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ (ಇಎಫ್‌ಎಸ್) ಸೋಮವಾರ ಚೆನ್ನೈನಲ್ಲಿರುವ ರಾಜ್ಯ ಕೈಗಾರಿಕಾ ಸಚಿವ ಎಂ.ಸಿ.ಸಂಪತ್ ಅವರ ಸಂಬಂಧಿಕ ಮನೆಯಲ್ಲಿ ದಾಳಿ ನಡೆಸಿದೆ.

ಎಐಎಡಿಎಂಕೆ ಸಚಿವರ ಸಂಬಂಧಿ ಇಳಂಗೋವನ್​ ಅವರ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, 11 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನು ಓದಿ: ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿವಾದ : ಅಡ್ಡಗೋಡೆ ಮೇಲೆ ದೀಪವಿಟ್ಟ ಸಿಎಟಿ

ಇಳಂಗೋವನ್ ಅವರ ಶಿಕ್ಷಣ ಸಂಸ್ಥೆಗಳಲ್ಲಿ, ಒಡೆತನದ ಹಣಕಾಸು ಕಂಪನಿಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಚೆನ್ನೈನ ಡಿಎನ್‌ಸಿ ಚಿಟ್ ಫಂಡ್ ಕಾರ್ಪೊರೇಟ್ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮೂರು ದಿನಗಳಲ್ಲಿ 11 ಕೋಟಿ ರೂ.ವಶಪಡಿಸಿಕೊಂಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ, ಐ-ಟಿ ಇಳಂಗೋವನ್​ಗೆ ಸಮನ್ಸ್ ನೀಡಿದೆ.

ವಿಶೇಷವೆಂದರೆ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸಚಿವ ಎಂ.ಸಿ.ಸಂಪತ್ ಅವರು ಕಡಲೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ABOUT THE AUTHOR

...view details