ನವದೆಹಲಿ:ಮತದಾನ ದಿನವನ್ನು ಮುಂದೂಡುವಂತೆ ಸಲ್ಲಿಸಲಾಗಿದ್ದ ಮನವಿಯ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ಮಣಿಪುರ ವಿಧಾನಸಭೆ ಚುನಾವನಾ ದಿನಾಂಕವನ್ನು ಪರಿಷ್ಕರಿಸಲಾಗಿದ್ದು, ಫೆ.28 ಮತ್ತು ಮಾರ್ಚ್ 5 ರಂದು ಮತದಾನ ನಡೆಯಲಿದೆ.
ಮಣಿಪುರ ವಿಧಾನಸಭೆಗೆ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಿಗದಿ ಮಾಡಲಾಗಿತ್ತು. ಆದರೆ, ವಿವಿಧ ಕಾರಣಕ್ಕಾಗಿ ಮತದಾನ ದಿನಾಂಕವನ್ನು ಮುಂದೂಡುವ ಬಗ್ಗೆ ಮನವಿ ಬಂದಿತ್ತು. ಮನವಿಯನ್ನು ಪರಿಗಣಿಸಿ ಫೆ.28 ರಂದು ಮೊದಲ ಹಂತದ ಮತದಾನ ಮತ್ತು ಮಾ.5 ರಂದು ಎರಡನೇ ಹಂತದ ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.