ಕರ್ನಾಟಕ

karnataka

ETV Bharat / bharat

ಗುಜರಾತ್​ ವಿಧಾನಸಭಾ ಚುನಾವಣೆ : ಶಿಯಾಲ್​ಬೆಟ್‌ ದ್ವೀಪದಲ್ಲಿ ಮತದಾನಕ್ಕೆ ಸಿದ್ಧತೆ

ಗುಜರಾತ್​ ವಿಧಾನಸಭಾ ಚುನಾವಣೆ ಹಿನ್ನೆಲೆ, ಇಲ್ಲಿನ ರಾಜುಲಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಶಿಯಾಲ್‌ಬೆಟ್ ದ್ವೀಪಕ್ಕೆ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬೋಟ್​ನಲ್ಲಿ ತೆರಳಿದ್ದಾರೆ. ಸುಮಾರು 50 ಸಿಬ್ಬಂದಿಗಳು ಬೋಟ್ ಮೂಲಕ ಮತದಾನ ಸ್ಥಳಕ್ಕೆ ತೆರಳಿದ್ದು,ನಾಳಿನ ಚುನಾವಣೆಗೆ ತಯಾರಿ ನಡೆಸಿದ್ದಾರೆ.

election-commission-dedication-to-voting-team-travelled-across-the-ocean-for-shiyalbet-voting
ಗುಜರಾತ್​ ವಿಧಾನಸಭಾ ಚುನಾವಣೆ : ಶಿಯಾಲ್​ಬೆಟ್‌ ದ್ವೀಪದಲ್ಲಿ ಮತದಾನಕ್ಕೆ ಸಿದ್ಧತೆ

By

Published : Nov 30, 2022, 9:50 PM IST

ಗಾಂಧಿನಗರ( ಗುಜರಾತ್)​​ :​ ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಹಲವು ಸಿದ್ಧತೆಗಳು ನಡೆದಿವೆ. ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಇಲ್ಲಿನ ರಾಜುಲಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಶಿಯಾಲ್‌ಬೆಟ್ ದ್ವೀಪಕ್ಕೆ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬೋಟ್​ನಲ್ಲಿ ತೆರಳಿದ್ದಾರೆ. ಸುಮಾರು 50 ಸಿಬ್ಬಂದಿಗಳು ಬೋಟ್ ಮೂಲಕ ಮತದಾನ ಸ್ಥಳಕ್ಕೆ ತೆರಳಿದ್ದು, ನಾಳಿನ ಚುನಾವಣೆಗೆ ತಯಾರಿ ನಡೆಸಿದ್ದಾರೆ.

ದ್ವೀಪದಲ್ಲಿ ಮತದಾನ : ರಾಜುಲಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಶಿಯಾಲ್‌ಬೆಟ್ ದ್ವೀಪದಲ್ಲಿ ಮತದಾನ ನಡೆಯಲಿದೆ. ಶಿಯಾಲ್​​ಬೆಟ್ ದ್ವೀಪವು ಸುತ್ತಲೂ ನೀರಿನಿಂದ ಆವೃತವಾಗಿದೆ. ಇಲ್ಲಿ ಸುಮಾರು 7,700 ಕ್ಕೂ ಹೆಚ್ಚು ಮತದಾರರಿದ್ದು, ದ್ವೀಪದಲ್ಲಿ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಗುಜರಾತ್​ ವಿಧಾನಸಭಾ ಚುನಾವಣೆ : ಶಿಯಾಲ್​ಬೆಟ್‌ ದ್ವೀಪದಲ್ಲಿ ಮತದಾನಕ್ಕೆ ಸಿದ್ಧತೆ

ಚುನಾವಣೆ ಹಿನ್ನಲೆ ಸಿಬ್ಬಂದಿ ಇವಿಎಂ ವಿವಿಪ್ಯಾಟ್ ಸೇರಿದಂತೆ ಮತದಾನಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಚುನಾವಣಾ ಸಿಬ್ಬಂದಿಗಳ ಜೊತೆಗೆ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.

ಶಿಯಾಲ್​ಬೆಟ್‌ನಲ್ಲಿ ಮತದಾನ: ಶಿಯಾಲ್​​ಬೆಟ್ ದ್ವೀಪದಲ್ಲಿ ಕಳೆದ ಕೆಲವು ದಶಕಗಳಿಂದ ಚುನಾವಣೆಗಳನ್ನು ನಡೆಯುತ್ತಿದೆ. ನೀರಿನಿಂದ ಆವೃತವಾಗಿರುವ ದ್ವೀಪದಲ್ಲಿ ಮೀನುಗಾರರು ಮಾತ್ರ ನೆಲೆಸಿದ್ದು, ಒಟ್ಟು 7,757 ಮತಗಳಿವೆ.

ಇದನ್ನೂ ಓದಿ :ಗುಜರಾತ್ ಚುನಾವಣೆ: ಪ್ರಥಮ ಹಂತದ ಮತದಾನ ನಾಳೆ

ABOUT THE AUTHOR

...view details