ನವದೆಹಲಿ:ಉತ್ತರ ಪ್ರದೇಶ, ಗೋವಾ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾಣೆಯ ದಿನಾಂಕ ಘೋಷಿಸಲಾಗಿದೆ. ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ಐದು ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ಸೇರಿದಂತೆ ಆಯೋಗದ ವಿವಿಧ ಅಧಿಕಾರಿಗಳು ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿದ್ದರು.
ಪಂಚ ರಾಜ್ಯಗಳ ಮತದಾನದ ದಿನಾಂಕ ಇಂತಿದೆ... ಕೇಂದ್ರ ಚುನಾವಣಾ ಆಯೋಗದ ಮಾಧ್ಯಮಗೋಷ್ಟಿಯ ಪ್ರಮುಖಾಂಶಗಳು
ಚುನಾವಣೆ ದಿನಾಂಕ ಘೋಷಣೆ(seven-phase polls in 5 states)
ಐದು ರಾಜ್ಯಗಳಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ
- ಉತ್ತರ ಪ್ರದೇಶ: ಫೆ. 10ರಂದು ಮೊದಲ ಹಂತದ ಮತದಾನ
- ಫೆ. 14ರಂದು ಎರಡನೇ ಹಂತದ ವೋಟಿಂಗ್
- 20 ಫೆ. 3ನೇ ಹಂತದ ಮತದಾನ
- 23 ಫೆ. 4ನೇ ಹಂತದ ಮತದಾನ
- 2ನೇ ಹಂತ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಗೋವಾದಲ್ಲಿ ಫೆ. 14ರಂದು
- ಫೆ. 27ರಂದು 5ನೇ ಹಂತದ ಮತದಾನ
- 2ನೇ ಹಂತ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ ಹಾಗೂ ಗೋವಾದಲ್ಲಿ ಫೆ. 14ರಂದು
- ಮಾರ್ಚ್ 10ರಂದು ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗ
- ಮಣಿಪುರದಲ್ಲಿ ಎರಡು ಹಂತದಲ್ಲಿ ಚುನಾವಣೆ
- ಉತ್ತರಾಖಂಡ, ಗೋವಾದಲ್ಲಿ ಒಂದೇ ಹಂತದಲ್ಲಿ ವೋಟಿಂಗ್
- ಫೆ. 10ರಿಂದ ಮಾರ್ಚ್ 7ರೊಳಗೆ ಎಲ್ಲ ರಾಜ್ಯದ ಚುನಾವಣೆ ಮುಕ್ತಾಯ
- ಉತ್ತರ ಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ
- ಪಂಜಾಬ್, ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತ, ಮಣಿಪುರದಲ್ಲಿ ಎರಡು ಹಂತದ ವೋಟಿಂಗ್
- ಕೋವಿಡ್ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲು ನಿರ್ಧಾರ
- ಐದು ರಾಜ್ಯಗಳಿಂದ 690 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ
- ಕೋವಿಡ್ ಮಾರ್ಗಸೂಚಿಗೆ ಹೆಚ್ಚಿನ ಆದ್ಯತೆ
- ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಚುನಾವಣಾ ಸಿಬ್ಬಂದಿ ಶೇ. 60ರಷ್ಟು ಏರಿಕೆ
- ವಿಶೇಷ ಚೇತನರು, ಮಹಿಳಾ ವೋಟರ್ಸ್ಗೆ ವಿಶೇಷ ಮತಕೇಂದ್ರ ರಚನೆಗೆ ನಿರ್ಧಾರ
- ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ
- ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಲು ನಿರ್ಧಾರ
- ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಸರ್ಗಳ ಬಳಕೆ ಕಡ್ಡಾಯ
- 18.34 ಕೋಟಿ ಮತದಾರರು ಐದು ರಾಜ್ಯಗಳಲ್ಲಿ ಮತದಾನ
- 29.4 ಲಕ್ಷ ಹೊಸ ಮತದಾರರಿಂದ ವೋಟಿಂಗ್
- ಎಲ್ಲ ಮತಗಟ್ಟೆ ಗ್ರೌಂಡ್ ಫ್ಲೋರ್ನಲ್ಲಿ ನಿರ್ಮಾಣ ಮಾಡಲು ನಿರ್ಧಾರ
- ಐದು ರಾಜ್ಯಗಳಲ್ಲಿ ಒಟ್ಟು 1,15,368 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ
- 80 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷ ಚೇತನರಿಗೆ ವೋಟ್ ಮಾಡಲು ವ್ಹೀಲ್ ಚೇರ್
- ಯಾವುದೇ ರೀತಿಯ ಅಕ್ರಮ ಚುನಾವಣೆಗೆ ಅವಕಾಶವಿಲ್ಲ, ಪ್ರತಿ ಮತಕ್ಷೇತ್ರಕ್ಕೂ ಅಧಿಕಾರಿ ನೇಮಕ
- ಮತದಾನಕ್ಕಾಗಿ ವಿವಿಪ್ಯಾಟ್, EVMಗಳ ಬಳಕೆಗೆ ನಿರ್ಧಾರ
- ಕೊರೊನಾ ಸೋಂಕಿತರಿಗೆ ಮನೆಯಿಂದಲೇ ಪೋಸ್ಟಲ್ ಮತದಾನ ಮಾಡಲು ಅವಕಾಶ
- ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಸೂಚನೆ, ಅಭ್ಯರ್ಥಿಗಳ ಎಲೆಕ್ಷನ್ ಖರ್ಚಿನಲ್ಲಿ ಏರಿಕೆ
- ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ
- ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳು ಚುನಾವಣಾ ಅಧಿಕಾರಿಗಳಾಗಿ ನಿಯೋಜನೆ
- ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಮಾಹಿತಿ ನೀಡುವುದು ಕಡ್ಡಾಯ
- ಚುನಾವಣಾ ಸಿಬ್ಬಂದಿಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯ, ಬೂಸ್ಟರ್ ವ್ಯಾಕ್ಸಿನ್
- ಚುನಾವಣಾ ಸಿಬ್ಬಂದಿ ಕೋವಿಡ್ ಫ್ರಂಟ್ಲೈನ್ ವಾರಿಯರ್ಸ್ ರೀತಿಯಲ್ಲಿ ಬಳಕೆ
- ಚುನಾವಣೆ ನಡೆಸಲು ಅನೇಕ ಸುತ್ತಿನ ಮಾತುಕತೆ ನಂತರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ
- ಮಣಿಪುರದಲ್ಲಿ ಅಭ್ಯರ್ಥಿಗಳು 28 ಲಕ್ಷ ರೂ. ಖರ್ಚು ಮಾಡಲು ಸೂಚನೆ
- ಮತದಾನದ ಅವಧಿ 1 ಗಂಟೆ ಏರಿಕೆ ಮಾಡಿದ ಕೇಂದ್ರ ಚು. ಆಯೋಗ
- ವರ್ಚುವಲ್ ಕ್ಯಾಂಪೇನ್ಗೂ ಅವಕಾಶ
- 15 ಜನವರಿವರೆಗೆ ಯಾವುದೇ ರೀತಿಯ ಸಾರ್ವಜನಿಕ ಸಭೆಗಳಿಗೆ ಅವಕಾಶವಿಲ್ಲ
- ಯಾವುದೇ ರೀತಿಯ ಪಾದಯಾತ್ರೆ, ಚುನಾವಣಾ ಸಭೆ, ರೋಡ್ ಶೋಗಳಿಗೆ ಅವಕಾಶವಿಲ್ಲ
- ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದ ಕೇಂದ್ರ ಚುನಾವಣಾ ಆಯೋಗ