ಕರ್ನಾಟಕ

karnataka

ETV Bharat / bharat

ಶಾರ್ಟ್​​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ವೃದ್ಧೆ ಸಾವು, ಐವರಿಗೆ ಗಂಭೀರ ಗಾಯ - ಉತ್ತರ ಪ್ರದೇಶದ ಸಹರನ್​ಪುರದಲ್ಲಿ ಅಗ್ನಿ ಅವಘಡ

ಉತ್ತರ ಪ್ರದೇಶದ ಸಹರನ್​ಪುರದಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಅಗ್ನಿ ಅವಘಡ ಸಂಭವಿಸಿ ಮನೆಗೆ ಹಾನಿಯಾಗಿದ್ದು, ವೃದ್ಧೆಯೊಬ್ಬರು ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

elderly-woman-dies-due-to-fire-in-house-5-family-members-scorched-in-saharanpur
ಶಾರ್ಟ್​​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ವೃದ್ಧೆ ಸಾವು, ಐವರಿಗೆ ಗಂಭೀರ ಗಾಯ

By

Published : Mar 8, 2022, 1:01 PM IST

ಸಹರನ್‌ಪುರ(ಉತ್ತರಪ್ರದೇಶ):ಮನೆ ಬೆಂಕಿಗೆ ಆಹುತಿಯಾಗಿ ವೃದ್ಧೆಯೊಬ್ಬರು ಸಾವನ್ನಪ್ಪಿ, ಐದು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಹರನ್​ಪುರದಲ್ಲಿ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಸ್ಬಾ ಗಂಗೋಹ್ ಪ್ರದೇಶದ ಮೊಹಲ್ಲಾ ಮಖ್ದೂಮ್‌ನಲ್ಲಿ ಮುಂಜಾನೆ 3 ಗಂಟೆಗೆ ಘಟನೆ ನಡೆದಿದ್ದು, ಸ್ಥಳಕ್ಕಾಗಮಿಸಿದ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿ, ಐವರನ್ನು ರಕ್ಷಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಗ್ನಿ ಅವಘಡ

ಅವರನ್ನು ಮೊದಲಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರನ್ನು ವೈದ್ಯರ ಶಿಫಾರಸಿನ ಮೇರೆಗೆ ಮೀರತ್​ಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹವನ್ನು ಹೊರತೆಗೆದಿದ್ದು, ಅಗ್ನಿ ಅನಾಹುತಕ್ಕೆ ಶಾರ್ಟ್​ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ.

ರೋಶ್ನಿ ಮೃತಪಟ್ಟ ವೃದ್ಧೆಯಾಗಿದ್ದು, 32 ವರ್ಷದ ಪ್ರವೀಣ್, ಆತನ ಪತ್ನಿ ಸೆಫಾಲಿ, ಮಕ್ಕಳಾದ ಓನಿಕ್, ಮಹಿ, ಅವ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಜೊತೆಗೆ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಅಗ್ನಿ ಅನಾಹುತಕ್ಕೆ ಎಂಟು ತಿಂಗಳ ಮಗು ಸೇರಿ ಐವರು ಸಜೀವ ದಹನ

ABOUT THE AUTHOR

...view details