ಬರೇಲಿ(ಉತ್ತರಪ್ರದೇಶ):ಪ್ರಸಾದ ನೀಡುವ ನೆಪದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ವೃದ್ಧನಿಗೆ ಇಲ್ಲಿನ ಪೋಕ್ಸೋ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಪಾದ್ರಿ ಎಂದು ಹೇಳಲಾಗುವ ದಿನೇಶ್ ಮಿಶ್ರಾ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿ. ಜಿಲ್ಲೆಯ ಕಿಲಾ ಪ್ರದೇಶದ ನಿವಾಸಿಯಾದ ಪಾದ್ರಿ ದಿನೇಶ್ ಮಿಶ್ರಾ ಆಗಸ್ಟ್ 26 ರಂದು ಪ್ರಸಾದ ನೀಡುವ ನೆಪದಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನು ಮನೆಗೆ ಕರೆದು ಅವಳ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಆಕೆ ನೀಡಿದ ದೂರಿನ ಮೇರೆಗೆ ವೃದ್ಧನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಸೆಪ್ಟೆಂಬರ್ 16 ರಂದು ಪ್ರಕರಣ ದಾಖಲಾಗಿತ್ತು.