ರಾಯಗಡ(ಒಡಿಶಾ): ವಾಮಾಚಾರ ನಡೆಸುತ್ತಿದ್ದಾನೆ ಎಂಬ ಶಂಕೆಯಿಂದ ಮನೆಯಲ್ಲಿ ಮಲಗಿದ್ದ ವೃದ್ಧನನ್ನು ಗ್ರಾಮಸ್ಥರೇ ಹಲ್ಲೆ ನಡೆಸಿ ಕೊಲೆಗೈದಿರುವ ಘಟನೆ ರಾಯಗಡ ಜಿಲ್ಲೆಯ ಕಾಶಿಪುರ ಬ್ಲಾಕ್‌ನ ತಿತಿಗುಡ ಗ್ರಾಮದಲ್ಲಿ ನಡೆದಿದೆ. ಮೃತನನ್ನು ದಾಯ್ ಮಾಝಿ ಎಂದು ಗುರುತಿಸಲಾಗಿದೆ. ಅವರ ಇಬ್ಬರು ಪುತ್ರರು ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ವಾಮಾಚಾರ ಶಂಕೆ: ಒಡಿಶಾದಲ್ಲಿ ವೃದ್ಧನ ಹೊಡೆದು ಕೊಂದು ಹಾಕಿದ ಗ್ರಾಮಸ್ಥರು - ಒಡಿಶಾ ಅಪರಾಧ ಸುದ್ದಿ
ವಾಮಾಚಾರ ಶಂಕೆಯಿಂದ ಮನೆಯಲ್ಲಿ ಮಲಗಿದ್ದ ವೃದ್ಧನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.
ದಾಯ್ ಮಾಝಿ ತನ್ನ ಪತ್ನಿ ಮತ್ತು ಇಬ್ಬರು ಪುತ್ರರೊಂದಿಗೆ ಬುಧವಾರ ರಾತ್ರಿ ಮನೆಯಲ್ಲಿ ಮಲಗಿದ್ದರು. ಈ ವೇಳೆ ಕೆಲವು ಗ್ರಾಮಸ್ಥರು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ತೀವ್ರ ಥಳಿಕ್ಕೊಳಗಾದ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಪುತ್ರರಿಗೂ ದುಷ್ಕರ್ಮಿಗಳು ಥಳಿಸಿದ್ದು ಅವರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯ ಪೊಲೀಸರು ಗ್ರಾಮಕ್ಕೆ ಧಾವಿಸಿ ಭದ್ರತೆ ಒದಗಿಸಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ:ನನಗೆ ಮಾಟ ಮಂತ್ರ ಮಾಡಿಸಿದವರನ್ನು ಶಿಕ್ಷಿಸಿದ್ರೆ 50,001 ಕಾಣಿಕೆ ಕೊಡುವೆ: ಸವದತ್ತಿ ಯಲ್ಲಮ್ಮನಿಗೆ ಭಕ್ತನ ಪತ್ರ