ಕೈಮೂರ್(ಬಿಹಾರ): ಕೇವಲ 500ರೂಪಾಯಿ ಆಸೆಗೋಸ್ಕರ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಪರಾದವೆಸಗಿರುವ ಅಣ್ಣನನ್ನ ಈಗಾಗಲೇ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಿಹಾರದ ಕೈಮೂರ್ನಲ್ಲಿ ಈ ಘಟನೆ ನಡೆದಿದ್ದು, 500ರೂಪಾಯಿ ನೀಡುವಂತೆ ಸಹೋದರನಾದ ಖುಷಿ ಶರ್ಮಾ ಬಳಿ ಅಣ್ಣ ರಾಮು ಕೇಳಿಕೊಂಡಿದ್ದಾನೆ. ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆಕ್ರೋಶಗೊಂಡಿರುವ ರಾಮು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ತದನಂತರ ಕೊಲೆ ಮಾಡಿದ್ದಾನೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆರೋಪಿಯ ಬಂಧನ ಮಾಡಿದ್ದಾರೆ.
ಇದನ್ನೂ ಓದಿರಿ: GST ಹಣ ಕಟ್ಟಬೇಡಿ: ನರೇಂದ್ರ ಮೋದಿ ಸಹೋದರನಿಂದ ವ್ಯಾಪಾರಿಗಳಿಗೆ ಮನವಿ