ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ!

ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಶಿವಸೇನೆಯ ಬಂಡಾಯ ಶಾಸಕ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ. ಇಂದು ಸಂಜೆ ರಾತ್ರಿ 7:30ಕ್ಕೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

Eknath Shinde will be Chief Minister of Maharashtra
Eknath Shinde will be Chief Minister of Maharashtra

By

Published : Jun 30, 2022, 4:41 PM IST

Updated : Jun 30, 2022, 5:36 PM IST

ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ದೇವೇಂದ್ರ ಫಡ್ನವೀಸ್​ ಘೋಷಿಸಿದರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಭೇಟಿ ಮಾಡಿದ ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿ, ಅಚ್ಚರಿಯ ವಿಚಾರ ಪ್ರಕಟಿಸಿದರು.

ಇಂದು ರಾತ್ರಿ 7:30ಕ್ಕೆ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು ಮುಖ್ಯಮಂತ್ರಿಯಾಗಿ ಏಕನಾಥ್​ ಶಿಂಧೆ ಪ್ರಮಾಣ ವಚನ ಸ್ವೀಕರಿಸುವರು ಎಂದು ಅವರು ತಿಳಿಸಿದರು.

"2019ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡಿದ್ದವು. ಜನರು ನಮಗೆ ಸರ್ಕಾರ ರಚಿಸಲು ಬೇಕಾದಷ್ಟು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಆದರೆ, ಶಿವಸೇನೆಯು ಕಾಂಗ್ರೆಸ್​, ಎನ್​​ಸಿಪಿ ಜೊತೆ ಮೈತ್ರಿ ಮಾಡಿಕೊಂಡಿತು. ಬಾಳಾಸಾಹೇಬ್​​ ತಮ್ಮ ಜೀವನದುದ್ದಕ್ಕೂ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾ ಬಂದರೂ ಅವರೊಂದಿಗೆ ಶಿವಸೇನೆ ಕೈಜೋಡಿಸಿತು. ಹಿಂದುತ್ವವಾದಿ ಮತ್ತು ಸಾವರ್ಕರ್​ ಅವರ ವಿರುದ್ಧ ಇರುವವರೊಂದಿಗೆ ಸೇನೆ ಸೇರಿಕೊಂಡು, ಜನರ ಆದೇಶವನ್ನು ಅವಮಾನಿಸಿದರು" ಎಂದು ಫಡ್ನವೀಸ್ ತಿಳಿಸಿದರು.

ಇದೇ ವೇಳೆ, ಹೊಸ ಸರ್ಕಾರದಲ್ಲಿ ತಾವು ಭಾಗಿಯಾಗುವುದಿಲ್ಲ ಎಂದು ಫಡ್ನವೀಸ್ ಸ್ಪಷ್ಟಪಡಿಸಿದರು.

"ಒಂದೆಡೆ ದಾವೂದ್ ಇಬ್ರಾಹಿಂನನ್ನು ವಿರೋಧಿಸಿದ ಶಿವಸೇನೆ, ಮತ್ತೊಂದೆಡೆ ದಾವೂದ್​ಗೆ ಸಹಾಯ ಮಾಡಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ವ್ಯಕ್ತಿಯನ್ನೇ ಸಂಪುಟದಲ್ಲಿ ಇಟ್ಟುಕೊಂಡಿತ್ತು. ಇದರಿಂದ ಜನರು ಬೇಸತ್ತು ಹೋದರು" ಎಂದು ಅವರು ಹೇಳಿದರು.

ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, "ಬಾಳಾಸಾಹೇಬ್​ ಅವರ ಹಿಂದುತ್ವವನ್ನು ಮುಂದೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಅಭಿವೃದ್ಧಿ ಪರ ಕಾರ್ಯಗಳು ಮುಂದುವರೆಯಲಿದ್ದು, ನಮ್ಮ ಪರವಾಗಿ 50 ಶಾಸಕರಿದ್ದಾರೆ" ಎಂದರು.

Last Updated : Jun 30, 2022, 5:36 PM IST

ABOUT THE AUTHOR

...view details