ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ದಿನದಿಂದಲೂ ರೋಚಕ ತಿರುವುಗಳೊಂದಿಗೆ ನಾಟಕೀಯ ಬೆಳವಣಿಗೆಗಳೂ ನಡೆಯುತ್ತಿದೆ. ಮಹಾವಿಕಾಸ್ ಆಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಏಕನಾಥ ಶಿಂದೆ ಗುಂಪು ತಮ್ಮನ್ನು ಅಪಹರಿಸಿ ಸೂರತ್ಗೆ ಕರೆದೊಯ್ದರು ಎಂದು ಶಿವಸೇನೆಯ ಶಾಸಕ ನಿತಿನ್ ದೇಶಮುಖ್ ಆರೋಪಿಸಿದ್ದರು. ಆದರೀಗ ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್ ದೇಶಮುಖ್ ಇರುವ ಫೋಟೋಗಳು ಬಿಡುಗಡೆಯಾಗಿವೆ.
ಶಿವಸೇನೆಯ ಪ್ರಬಲ ನಾಯಕರಾದ ಏಕನಾಥ ಶಿಂದೆ ನೇತೃತ್ವದ ಬಂಡಾಯ ಗುಂಪು ಮುಂಬೈ ಬಿಟ್ಟು ಗುಜರಾತ್ನ ಸೂರತ್ಗೆ ಹೋಗಿ ಬೀಡುಬಿಟ್ಟಿತ್ತು. ಆದರೆ, 24 ಗಂಟೆಗಳಲ್ಲಿ ಈ ಗುಂಪಿನಲ್ಲಿದ್ದ ಶಾಸಕರಾದ ಕೈಲಾಸ್ ಪಾಟೀಲ್ ಮತ್ತು ನಿತಿನ್ ದೇಶಮುಖ್ ಮುಂಬೈಗೆ ಮರಳಿ ಬಂದಿದ್ದರು.
ನಂತರ ಮುಂಬೈನಲ್ಲಿ ಮಾತನಾಡಿದ್ದ ನಿತಿನ್ ದೇಶಮುಖ್, ನನ್ನನ್ನು ಸೋಮವಾರ-ಮಂಗಳವಾರ ನಡುವಿನ ರಾತ್ರಿ ಅಪಹರಿಸಿ ಸೂರತ್‌ನಲ್ಲಿರುವ ಬಂಡಾಯ ಶಾಸಕರ ಗುಂಪಿನ ಜೊತೆ ಸೇರಿಸಿದರು. ನಾನು ಹೋಟೆಲ್ನಿಂದ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತಪ್ಪಿಸಿಕೊಂಡು ಹೊರಬಂದೆ ಎಂದು ಹೇಳಿಕೆ ಕೊಟ್ಟಿದ್ದರು.
ಇದನ್ನೂ ಓದಿ:'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್: ದಿಢೀರ್ ಸಭೆ ಕರೆದ ಕಾಂಗ್ರೆಸ್-ಎನ್ಸಿಪಿ