ಜಮ್ಮು-ಕಾಶ್ಮೀರ: ತಾಲಿಬಾನ್ ಉಗ್ರ ಸಂಘಟನೆಯೋ, ಅಲ್ಲವೋ? ಅವರನ್ನು ನೀವು ಹೇಗೆ ನೋಡುತ್ತೀರಿ ಎಂಬುದನ್ನು ದಯವಿಟ್ಟು ಸ್ಪಷ್ಟಪಡಿಸಿ. ಒಂದು ವೇಳೆ ಅವರದ್ದು ಉಗ್ರ ಸಂಘಟನೆಯಾಗಿದ್ದರೆ, ಅವರೊಂದಿಗೆ ಮಾತುಕತೆ ಏಕೆ? ಎಂದು ಒಮರ್ ಅಬ್ದುಲ್ಲಾ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆಯಾಗಿದ್ದರೆ ಅವರೊಂದಿಗೆ ಮಾತುಕತೆ ಏಕೆ?: ಒಮರ್ ಅಬ್ದುಲ್ಲಾ - ಒಮರ್ ಅಬ್ದುಲ್ಲಾ
ಕತಾರ್‌ನಲ್ಲಿರುವ ಭಾರತದ ರಾಯಭಾರಿ ದೀಪಕ್ ಮಿತ್ರಲ್ ಅವರು ತಾಲಿಬಾನ್ ಉಗ್ರ ಸಂಘಟನೆಯ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಅವರೊಂದಿಗೆ ನಿನ್ನೆ ಮಹತ್ವದ ಮಾತುಕತೆ ನಡೆಸಿದ್ದರು. ಕೇಂದ್ರ ಸರ್ಕಾರದ ಈ ನಡೆಯನ್ನು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆಯಾಗಿದ್ದರೆ ಅವರೊಂದಿಗೆ ಮಾತುಕತೆ ಯಾಕೆ?: ಒಮರ್ ಅಬ್ದುಲ್ಲಾ ಪ್ರಶ್ನೆ
ತಾಲಿಬಾನ್ ಮನವಿಯ ಮೇರೆಗೆ ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ತಾಲಿಬಾನ್‌ನ ರಾಜಕೀಯ ನಾಯಕನೂ ಆಗಿರುವ ಸ್ಟಾನೆಕ್‌ಜೈ ಅವರೊಂದಿಗೆ ನಿನ್ನೆ ಮಹತ್ವದ ಮಾತುಕತೆ ನಡೆಸಿದ್ದರು.
ಈ ವೇಳೆ, ಅಫ್ಘಾನಿಸ್ತಾನದಲ್ಲಿದ್ದ ಭಾರತೀಯರನ್ನು ಸ್ಥಳಾಂತರಿಸುವ ವಿಚಾರ ಸೇರಿದಂತೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂಬ ಮಾಹಿತಿ ದೊರೆತಿದೆ.