ಕರ್ನಾಟಕ

karnataka

ETV Bharat / bharat

ಆವಿಷ್ಕಾರಗಳಿಂದಲೇ ಸಾಧನಗೈದ ‘ಒಡಿಶಾದ ಐನ್‌ಸ್ಟೀನ್’.. 25 ವಿಶ್ವದಾಖಲೆ ಬರೆದ ಛಲಗಾರ.. - ವಿಜ್ಞಾನ ಕ್ಷೇತ್ರ

1987ರಲ್ಲಿ ಮಿಹಿರ್​ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡುತ್ತಿದ್ದರು. ಆಗ, ಅವರು ಹೊಸ ಸಂಶೋಧನಾ ಕಾರ್ಯಗಳನ್ನು ನಡೆಸಲು ಪ್ರಾರಂಭಿಸಿದರು. ಹತ್ತಿರದ ಪ್ರದೇಶಗಳ ಜನರ ಅಗತ್ಯವನ್ನು ಮನಗಂಡ ಅವರು ಒಂದೊಂದಾಗಿ ಹೊಸ ಆವಿಷ್ಕಾರಗಳನ್ನು ಮಾಡಿದರು..

einstein-of-odisha
ಒಡಿಶಾದ ಐನ್‌ಸ್ಟೀನ್

By

Published : May 8, 2021, 6:04 AM IST

ಭುವನೇಶ್ವರ (ಒಡಿಶಾ) : ಹೀಗೆ ನೋಡಿದಲ್ಲೆಲ್ಲಾ ಬಹುಮಾನಗಳು. ಬಾಲಸೋರ್ ಜಿಲ್ಲೆಯ ಬಹನಾಗ ಬ್ಲಾಕ್​ನಲ್ಲಿರುವ ಇಚಾಪುರ ಗ್ರಾಮದ ಮಿಹಿರ್ ಕುಮಾರ್ ಪಾಂಡ ಈ ಎಲ್ಲ ಪ್ರಶಸ್ತಿಗಳ ಒಡೆಯ.

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು, ವಿಜ್ಞಾನದಲ್ಲಿ ಆಸಕ್ತಿ ಹೊಂದಿದ್ದಾರೆ. ವಿಜ್ಞಾನದ ಮೇಲಿನ ಅವರ ಆಸಕ್ತಿಗೆ ದೊರೆತ ಪ್ರತಿಫಲವೇ ಈ ಪ್ರಶಸ್ತಿಗಳು.

ದೈನಂದಿನ ಕೆಲಸಗಳನ್ನು ಸುಲಭ ಮತ್ತು ಆರಾಮದಾಯಕವಾಗಿಸುವ ಗುರಿಯನ್ನು ಹೊಂದಿರುವ ಹತ್ತು ಸಾವಿರಕ್ಕೂ ಹೆಚ್ಚು ಯೋಜನೆಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಆವಿಷ್ಕಾರಗಳಿಂದಲೇ ಸಾಧನಗೈದ ‘ಒಡಿಶಾದ ಐನ್‌ಸ್ಟೀನ್’..

ರೈತರು ಮತ್ತು ನೇಕಾರರಂತಹ ಸಾಮಾನ್ಯ ಜನರ ವಿಭಿನ್ನ ಸಮಸ್ಯೆಗಳಿಗೆ ಪರಿಹಾರವು ಇವರ ಬಳಿಯಿದೆ. ಸೈಕಲ್ ರಿಕ್ಷಾ ಚಾಲಿತ ಕೊಯ್ಲು ಯಂತ್ರಗಳು, ಅಗ್ಗದ ರೆಫ್ರಿಜರೇಟರ್​ಗಳು, ಡ್ಯುಯಲ್ ಫೇಸ್ ಫ್ಯಾನ್, ವಿದ್ಯುತ್ ಉತ್ಪಾದಿಸುವ ಫ್ಯಾನ್, ವಿವಿಧ ಮಸಾಲೆಗಳಿಂದ ಪೇಸ್ಟ್‌ಗಳನ್ನು ಏಕಕಾಲದಲ್ಲಿ ತಯಾರಿಸುವ ಯಂತ್ರ, ಪ್ಯಾಡಲ್ ಚಾಲಿತ ಯಂತ್ರ ಸೇರಿದಂತೆ ಹಲವಾರು ಅದ್ಭುತ ಆವಿಷ್ಕಾರಗಳನ್ನು ಮಾಡಿದ್ದಾರೆ. ಆದ್ದರಿಂದಲೇ ಅವರನ್ನು ‘ಒಡಿಶಾದ ಐನ್‌ಸ್ಟೀನ್’ ಎಂದೇ ಕರೆಯಲಾಗುತ್ತದೆ.

ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತದ ಆರು ಉನ್ನತ ವ್ಯಕ್ತಿಗಳಲ್ಲಿ ಮಿಹಿರ್ ಸ್ಥಾನ ಪಡೆದಿದ್ದಾರೆ. 25 ವಿಶ್ವ ದಾಖಲೆಗಳೊಂದಿಗೆ, ಅವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿದೆ ಮತ್ತು ಅವರು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ವಿಶಿಷ್ಟ ಆವಿಷ್ಕಾರಗಳಿಂದಾಗಿ ಅವರಿಗೆ 250ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರ ತಂದೆಯ ಯಶಸ್ಸಿನಿಂದ ಪ್ರೇರಿತರಾಗಿ, ಮಿಹಿರ್ ಅವರ ಮಗ ಕೂಡ ಭವಿಷ್ಯದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವ ಗುರಿ ಹೊಂದಿರುವುದು ವಿಶೇಷ.

1987ರಲ್ಲಿ ಮಿಹಿರ್​ ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡುತ್ತಿದ್ದರು. ಆಗ, ಅವರು ಹೊಸ ಸಂಶೋಧನಾ ಕಾರ್ಯಗಳನ್ನು ನಡೆಸಲು ಪ್ರಾರಂಭಿಸಿದರು. ಹತ್ತಿರದ ಪ್ರದೇಶಗಳ ಜನರ ಅಗತ್ಯವನ್ನು ಮನಗಂಡ ಅವರು ಒಂದೊಂದಾಗಿ ಹೊಸ ಆವಿಷ್ಕಾರಗಳನ್ನು ಮಾಡಿದರು.

ವಿಜ್ಞಾನ ಲೋಕದಲ್ಲಿ ಮಿಹಿರ್​ ಅವರ ಸಾಧನೆ ನಿಜಕ್ಕೂ ಅವಿಸ್ಮರಣೀಯವಾಗಿವೆ. ಇವರ ಆವಿಷ್ಕಾರಗಳಿಂದ ಇಂದು ಅದೆಷ್ಟೋ ಜನ ಉಪಯೋಗ ಪಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ABOUT THE AUTHOR

...view details