ಕರ್ನಾಟಕ

karnataka

By

Published : Nov 6, 2020, 7:04 AM IST

ETV Bharat / bharat

ಇಂದು ಭಾರತ-ಚೀನಾ ನಡುವೆ 8ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ

ಗಡಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಇಂದು ಭಾರತ ಮತ್ತು ಚೀನಾ ನಡುವೆ 8ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ.

Eighth round of Corps Commander-level talks
ಭಾರತ-ಚೀನಾ ನಡುವೆ 8ನೇ ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ

ನವದೆಹಲಿ:ಇಂದು ಭಾರತ ಮತ್ತು ಚೀನಾ ಸೈನ್ಯಗಳ ನಡುವೆ ಎಂಟನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಪೂರ್ವ ಲಡಾಖ್​‌ನ ಚುಶುಲ್‌ನಲ್ಲಿ ನಡೆಯಲಿದೆ.

ಈ ವರ್ಷದ ಏಪ್ರಿಲ್-ಮೇ ತಿಂಗಳಿನಿಂದ ಪೂರ್ವ ಲಡಾಖ್​ ವಲಯದಲ್ಲಿ ನಡೆಯುತ್ತಿರುವ ಮಿಲಿಟರಿ ನಿಲುವನ್ನು ಪರಿಹರಿಸುವ ವಿಧಾನಗಳನ್ನು ಎರಡೂ ಕಡೆಯವರು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಅವರಿಂದ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಹೊಸ 14 ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಅವರು ಭಾರತದ ಪರ ನೇತೃತ್ವ ವಹಿಸಲಿದ್ದಾರೆ.

ಆರು ತಿಂಗಳ ಬಿಕ್ಕಟ್ಟು ಪರಿಹರಿಸಲು ಎರಡೂ ಕಡೆಯ ಮಿಲಿಟರಿ ಕಮಾಂಡರ್‌ಗಳು ಕೊನೆ ಬಾರಿ ಅಕ್ಟೋಬರ್ 12ರಂದು ಚರ್ಚೆ ನಡೆಸಿದ್ದರು. ಆದರೆ ವಿವಾದಕ್ಕೆ ಯಾವುದೇ ಪರಿಹಾರವಿಲ್ಲದೆ ಸಭೆ ಕೊನೆಗೊಂಡಿತ್ತು. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನವನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ತಲುಪಲಿದ್ದಾರೆ ಎಂದು ಹೇಳಲಾಗಿತ್ತು.

ಭಾರತ-ಚೀನಾ ನಡುವೆ ಈಗಾಗಲೇ ಏಳು ಬಾರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಇದಕ್ಕೂ ಮೊದಲು ಜೂನ್ 6, ಜೂನ್ 22, ಜೂನ್ 30, ಜುಲೈ 14, ಆಗಸ್ಟ್ 2, ಸೆಪ್ಟೆಂಬರ್​ 21 ಹಾಗೂ ಅಕ್ಟೋಬರ್ 12ರಂದು ಸಭೆಗಳು ನಡೆದಿದ್ದವು.

ABOUT THE AUTHOR

...view details