ಕರ್ನಾಟಕ

karnataka

ETV Bharat / bharat

10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ 8 ವರ್ಷದ ಗಣಿತ ಗುರು: ಬಾಲ ಪ್ರತಿಭೆಯ ಶಿಕ್ಷಣದ ಹೊಣೆ ಹೊತ್ತ ಸೋನು ಸೂದ್

ಪಾಟ್ನಾದ ಸಮೀಪದ ಚಾಪೌರ್ ಗ್ರಾಮದ ಬಾಲಕ ಬಾಬಿ ರಾಜ್ ತನ್ನ ಪ್ರತಿಭೆಯಿಂದಲೇ ಗಣಿತ ಗುರು ಎಂದೇ ಇಡೀ ಪಾಟ್ನಾ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಇದನ್ನು ಬಾಲಿವುಡ್​ ನಟ ಸೋನು ಸೂದ್ ಶ್ಲಾಘಿಸಿದ್ದಾರೆ.

eight-year-old-math-guru-bobby-raj-of-patna
10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ 8 ವರ್ಷದ ಗಣಿತ ಗುರು: ಬಾಲ ಪ್ರತಿಭೆಯ ಶಿಕ್ಷಣದ ಹೊಣೆ ಹೊತ್ತ ಸೋನು ಸೂದ್

By

Published : Sep 29, 2022, 5:35 PM IST

ಪಾಟ್ನಾ (ಬಿಹಾರ): ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿ ಹಳ್ಳಿಯಲ್ಲೂ ಪ್ರತಿಭೆಗಳು ನೆಲೆಸಿರುತ್ತವೆ. ಬಿಹಾರದಲ್ಲೂ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಇದ್ದಾರೆ. ಈ ವಿದ್ಯಾರ್ಥಿ ಮೂರನೇ ತರಗತಿಯಲ್ಲಿ ಓದುತ್ತಾರೆ. ಆದರೆ, ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಗಣಿತವನ್ನು ಬಹಳ ಸುಲಭವಾಗಿ ಕಲಿಸುತ್ತಾರೆ.

ಹೌದು, ರಾಜಧಾನಿ ಪಾಟ್ನಾದ ಸಮೀಪದ ಚಾಪೌರ್ ಗ್ರಾಮದ ಬಾಲಕ ಬಾಬಿ ರಾಜ್ ತನ್ನ ಪ್ರತಿಭೆಯಿಂದಲೇ ಗಣಿತ ಗುರು ಎಂದೇ ಇಡೀ ಪಾಟ್ನಾ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಬಿ ರಾಜ್ ಅವರ ತಂದೆ ರಾಜಕುಮಾರ್ ಮಹ್ತೊ ಶಿಕ್ಷಕರಾಗಿದ್ದು, ಖಾಸಗಿಯಾಗಿ ಶಾಲೆ ಹಾಗೂ ಟ್ಯೂಷನ್ ಹೇಳಿ ಜೀವನ ಸಾಗಿಸುತ್ತಿದ್ದಾರೆ.

ಈ ಬಾಲಕನಿಗೆ ಗಣಿತ ಅತ್ಯಂತ ಸುಲಭ:ಕೇವಲ 8 ವರ್ಷದ ಬಾಬಿ ರಾಜ್​ ತನ್ನ ಬುದ್ಧಿ ಸಾಮರ್ಥ್ಯದಿಂದಲೇ ಹಿರಿಯರನ್ನು ಸೋಲಿಸುತ್ತಾರೆ. ಒಂಬತ್ತು ಮತ್ತು ಹತ್ತನೆಯ ಗಣಿತವನ್ನು ಅತ್ಯಂತ ಸುಲಭವಾಗಿ ಪರಿಹರಿಸುವ ಮೂಲಕ ಇತರ ವಿದ್ಯಾರ್ಥಿಗಳಿಗೂ ಕಲಿಸುತ್ತಾರೆ. ಇದಲ್ಲದೇ, ಇದು ಇಂಗ್ಲಿಷ್, ಸಂಸ್ಕೃತ ಮತ್ತು ಅನೇಕ ಪ್ರಕಾರದ ಶಾಯರಿಗಳನ್ನೂ ಈ ಬಾಲಕ ಕರಗತ ಮಾಡಿಕೊಂಡಿದ್ದು, ವಿವಿಧ ಕಲೆಗಳಲ್ಲಿ ಪ್ರವೀಣರಾಗಿದ್ದಾರೆ. ಬಾಬಿ ರಾಜ್​​ ಪ್ರತಿಭೆಯನ್ನು ಬಾಲಿವುಡ್​ ನಟ ಸೋನು ಸೂದ್ ಶ್ಲಾಘಿಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ 8 ವರ್ಷದ ಗಣಿತ ಗುರು: ಬಾಲ ಪ್ರತಿಭೆಯ ಶಿಕ್ಷಣದ ಹೊಣೆ ಹೊತ್ತ ಸೋನು ಸೂದ್

ಈಟಿವಿ ಭಾರತದ ವಿಶೇಷ ಸಂದರ್ಶನದಲ್ಲಿ ಬಾಲ ಪ್ರತಿಭೆ ಬಾಬಿ ರಾಜ್​​ ಹಾಗೂ ಆತನ ತಂದೆ ರಾಜಕುಮಾರ್ ಮತ್ತು ತಾಯಿ ಚಂದ್ರಪ್ರಭಾ ಕುಮಾರಿ ಮಾತನಾಡಿ, ಮುಂದೆ ಚೆನ್ನಾಗಿ ಓದಿ ವಿಜ್ಞಾನಿಯಾಗಲು ಬಾಬಿ ರಾಜ್ ಇಚ್ಛಿಸಿರುವುದಾಗಿ ಹೇಳಿದರು. 2018ರಲ್ಲಿ ಖಾಸಗಿ ಶಾಲೆಯನ್ನು ನಾವು ಆರಂಭಿಸಿದ್ದೆವು. ಕೊರೊನಾ ಅವಧಿಯಲ್ಲಿ ಎಲ್ಲ ಕೋಚಿಂಗ್ ಶಾಲೆಗಳನ್ನು ಮುಚ್ಚಿದಾಗ ಬಾಬಿ ರಾಜ್‌ಗೆ ಮನೆಯಲ್ಲಿಯೇ ಕಲಿಸಲು ಪ್ರಾರಂಭಿಸಲಾಯಿತು ಎಂದು ಪೋಷಕರು ತಿಳಿಸಿದರು.

ಇದನ್ನೂ ಓದಿ:11ರ ಪೋರನ ಕೋಡಿಂಗ್ ಪ್ರತಿಭೆಗೆ ಭೇಷ್ ಎಂದ ನಾಸಾ.. ಮಂಗಳ ಮಿಷನ್​ ತಂಡಕ್ಕೆ ಆಯ್ಕೆ

ನಮ್ಮ ಶಾಲೆಯಲ್ಲಿ ನರ್ಸರಿಯಿಂದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಕಲಿಸಲಾಗುತ್ತದೆ. ಗ್ರಾಮದ ಬಹುತೇಕ ಮಕ್ಕಳು ಈ ಶಾಲೆಗೆ ಓದಲು ಬರುತ್ತಾರೆ. ಶಾಲೆಯ ಜೊತೆಗೆ ಮನೆಯಲ್ಲಿ ಟ್ಯೂಷನ್ ಕೂಡ ಹೇಳಲಾಗುತ್ತದೆ. ಬಾಬಿಯ ಪ್ರತಿಭೆ ನೋಡಿ ಕೋಚಿಂಗ್ ಹೇಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಬಾಬಿ ಎಲ್ಲ ವಿದ್ಯಾರ್ಥಿಗಳಿಗೆ ಬಹಳ ಸುಲಭವಾಗಿ ಗಣಿತ ಕಲಿಸಿಡುತ್ತಾನೆ ಎಂದು ಚಂದ್ರಪ್ರಭಾ ಕುಮಾರಿ ಹೇಳಿದರು.

ಸೋನು ಸೂದ್ ಕೂಡ ಹೊಗಳಿದ್ದಾರೆ: ಬಾಲಿವುಡ್ ಸ್ಟಾರ್ ನಟ ಸೋನು ಸೂದ್ ಕೂಡ ಬಾಲಕ ಬಾಬಿ ರಾಜ್​ ಬಗ್ಗೆ ಹೊಗಳಿದ್ದಾರೆ. ಇದೇ ಸೆಪ್ಟೆಂಬರ್​ 21ರಂದು ಸೋನು ಸೂದ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಪಾಟ್ನಾಗೆ ಬಂದಾಗ ಬಾಬಿಯನ್ನು ಭೇಟಿ ಮಾಡಿದ್ದರು. ಅಲ್ಲದೇ, ಸೋನು ಸೂದ್ ಬಾಬಿ ಜೊತೆಗಿನ ಫೋಟೋವನ್ನೂ ಟ್ವೀಟ್ ಮಾಡಿದ್ದರು. ಇಷ್ಟೇ ಅಲ್ಲ ನಟ ಸೋನು ಸೂದ್ ಬಾಲಕ ಬಾಬಿ ರಾಜ್​ ಶಿಕ್ಷಣದ ಜವಾಬ್ದಾರಿಯನ್ನೂ ಹೊತ್ತು ಕೊಂಡಿದ್ದಾರೆ.

ಇದನ್ನೂ ಓದಿ:ಜರ್ಮನ್​ ಸೈನ್ಸ್​ ಎಕ್ಸ್​ಪೋಗೆ ಪಂಜಾಬ್​ ವಿದ್ಯಾರ್ಥಿ ಆಯ್ಕೆ.. ಭಾರತದಿಂದ ಇಬ್ಬರು ಸ್ಟೂಡೆಂಟ್ಸ್​ ಭಾಗಿ

ABOUT THE AUTHOR

...view details