ಸಿಮಡೇಗಾ(ಜಾರ್ಖಂಡ್):ಇಲ್ಲಿನ ಕೊಳೆಬಿರಾ ಪೊಲೀಸ್ ಠಾಣಾ ವ್ಯಾಪ್ತಿಯ ಮದರಸಾದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದಿದೆ. ಸಂತ್ರಸ್ತೆಯ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಇಮಾಮ್ ಅಮಿನುಲ್ಲಾ ಅಲಿಯಾಸ್ ಅಮೀನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸೌರಭ್ ಕುಮಾರ್ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದವರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಬಾಲಕಿ ಉರ್ದು ಕಲಿಯಲು ಭಾನುವಾರ ಮದರಸಾಕ್ಕೆ ಹೋಗಿದ್ದಳು. ಅಧ್ಯಯನ ಮುಗಿದ ನಂತರ ಇಮಾಮ್ ಇತರ ಮಕ್ಕಳನ್ನು ಮನೆಗೆ ಹೋಗಲು ಅನುಮತಿಸಿದ್ದಾರೆ. ಬಾಲಕಿಯನ್ನು ಅಲ್ಲಿಯೇ ಇರಿಸಿಕೊಂಡು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.
ಯಾರಿಗೂ ಹೇಳದಂತೆ ಬೆದರಿಕೆ: ಈ ಘಟನೆಯನ್ನು ಯಾರಿಗೂ ಹೇಳದಂತೆ ಇಮಾಮ್ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಮನೆಗೆ ಬಂದ ಬಾಲಕಿ ತನ್ನ ಕುಟುಂಬಸ್ಥರಿಗೆ ಎಲ್ಲವನ್ನೂ ಹೇಳಿದ್ದಾಳೆ. ಇದರೊಂದಿಗೆ 2 ತಿಂಗಳ ಹಿಂದೆಯೂ ತನ್ನೊಂದಿಗೆ ಇಂತಹ ಘಟನೆ ನಡೆದಿತ್ತು ಎಂದು ಆಕೆ ಹೇಳಿದ್ದಾಳೆ. ಸಂಬಂಧಿಕರು ಅಂಜುಮನ್ ಸಂಸ್ಥೆಯ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.