ಕರ್ನಾಟಕ

karnataka

ETV Bharat / bharat

8 ವರ್ಷದ ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ: ಭಯಾನಕ ವಿಡಿಯೋ - ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ ವಿಡಿಯೋ ವೈರಲ್​​

ಬಟಿಂಡಾ ಜಿಲ್ಲೆಯ ರಾಂಪುರ ಗ್ರಾಮದ ನಿರ್ಮಲ್ ಸಿಂಗ್ ಎಂಬುವವರು ತನ್ನ 8 ವರ್ಷದ ಮಗಳು ಮನ್‌ಪ್ರೀತ್‌ಗೆ ನಿರ್ದಯವಾಗಿ ಥಳಿಸಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

Eight year old daughter badly beaten by father
8 ವರ್ಷದ ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ

By

Published : Apr 30, 2022, 1:41 PM IST

ಬಟಿಂಡಾ(ಪಂಜಾಬ್): ಎಂಟು ವರ್ಷದ ಬಾಲಕಿಗೆ ಆಕೆಯ ತಂದೆಯೇ ಮೃಗೀಯವಾಗಿ ಥಳಿಸಿರುವ ಘಟನೆ ವರದಿಯಾಗಿದೆ. ಬಟಿಂಡಾ ಜಿಲ್ಲೆಯ ರಾಂಪುರ ಗ್ರಾಮದ ನಿರ್ಮಲ್ ಸಿಂಗ್ ಎಂಬುವವರು ತನ್ನ 8 ವರ್ಷದ ಮಗಳು ಮನ್‌ಪ್ರೀತ್‌ಗೆ ನಿರ್ದಯವಾಗಿ ಥಳಿಸಿದ್ದಾನೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

8 ವರ್ಷದ ಬಾಲಕಿಗೆ ತಂದೆಯಿಂದ ಮಾರಣಾಂತಿಕ ಥಳಿತ: ಭಯಾನಕ ವಿಡಿಯೋ

ಅಲ್ಲದೇ ವಿಡಿಯೋದಲ್ಲಿ ಪಾಪಿ ತಂದೆ ಬಟ್ಟೆಯಿಂದ ಬಾಲಕಿಯ ಕತ್ತು ಹಿಸುಕಲು ಯತ್ನಿಸಿದ್ದಾನೆ. ಯಾರೋ ನಗುತ್ತಾ ಇಡೀ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ನಂತರ ಅವರೇ ಆತನನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತದೆ. ಲಭ್ಯವಿರುವ ಮಾಹಿತಿ ಪ್ರಕಾರ ಬಾಲಕಿಯ ತಾಯಿ ವಿಡಿಯೋ ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ತಂದೆಯೊಬ್ಬ ಮಗಳ ಕತ್ತು ಹಿಸುಕಲು ಯತ್ನಿಸಿ, ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮುಗ್ಧ ಮಗುವನ್ನು ರಾಕ್ಷಸನ ಹಾಗೆ ಥಳಿಸಿದ ಕ್ರೂರಿ : ವಿಡಿಯೋ ಭಯಾನಕ

For All Latest Updates

ABOUT THE AUTHOR

...view details