ದತಿಯಾ/ಮಧ್ಯಪ್ರದೇಶ: ಲಹರ್ ಹವೇಲಿ ಗ್ರಾಮದಲ್ಲಿ, ಎಂಟು ವರ್ಷದ ಬಾಲಕನನ್ನು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಚಾಕುವಿನಿಂದ ಕತ್ತು ಕೊಯ್ದು 8 ವರ್ಷದ ಬಾಲಕನ ಬರ್ಬರ ಹತ್ಯೆ - ಕತ್ತು ಕೊಯ್ದು ಬಾಲಕನ ಕೊಲೆ
ಎಂಟು ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ದತಿಯಾ ಜಿಲ್ಲೆಯ ಲಹರ್ ಹವೇಲಿ ಗ್ರಾಮದಲ್ಲಿ ನಡೆದಿದೆ.

ಬಾಲಕನ ಬರ್ಬರ ಹತ್ಯೆ
ಹತ್ಯೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ. ಚಾಕುವಿನಿಂದ ಬಾಲಕನ ಕುತ್ತಿಗೆ ಕೊಯ್ದು ಮನೆಯ ಆವರಣದಲ್ಲಿ ಹಾಕಿ ಆರೋಪಿ ಎಸ್ಕೇಪ್ ಆಗಿದ್ದಾನೆ.
ಮೂಲಗಳ ಪ್ರಕಾರ ಬಬ್ಲು ಕುಶ್ವಾಹ ಎಂಬ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕನ ಹತ್ಯೆ ನಡೆದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.