ರಾಯಗಢ: ಮಹಾರಾಷ್ಟ್ರದ ರಾಯಗಢದ ಸಮುದ್ರ ತೀರಗಳಿಗೆ ಕೊಳೆತ ಸ್ಥಿತಿಯಲ್ಲಿ ಎಂಟು ಶವಗಳು ತೇಲಿ ಬಂದಿವೆ. ಇದರಲ್ಲಿ ಕೆಲ ಮೃತದೇಹಗಳು ಬಾರ್ಜ್ P-305 ದುರಂತದಲ್ಲಿ ನಾಪತ್ತೆಯಾದವರದು ಎಂದು ಶಂಕಿಸಲಾಗಿದೆ.
ಅಲಿಬಾಗ್ ತಾಲೂಕಿನ ಆವಾಸ್ ಬೀಚ್ ಮತ್ತು ಡಿಘೋಡ್ ಬೀಚ್, ಮುರುದ್ ಗ್ರಾಮ ಸಮೀಪದ ಬೀಚ್, ನವಗಾಂವ್ ಸಮುದ್ರ ತೀರ ಸೇರಿ ಒಟ್ಟು ವಿವಿಧ ಕಡಲ ತೀರಗಳಲ್ಲಿ ಮೂರು ದಿನಗಳಲ್ಲಿ ಎಂಟು ಶವಗಳು ಪತ್ತೆಯಾಗಿವೆ. ಮೃತರನ್ನು ಗುರುತಿಸಲಾಗಿಲ್ಲ. ಪೊಲೀಸರು ಈ ಸಂಬಂಧ ತನಿಖೆ ಕೈಗೊಂಡಿದ್ದಾರೆ.
ರಾಯಗಢದ ಸಮುದ್ರ ತೀರಗಳಲ್ಲಿ ಶವಗಳು ಪತ್ತೆ ಬಾರ್ಜ್ P305 ನೌಕರರ ಶವ ಶಂಕೆ
ಮೇ 17ರಂದು ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬೀ ಸಮುದ್ರದಲ್ಲಿ P-305 ಬೋಟ್ ಹಡಗು ಹೋಗಿತ್ತು. ನೌಕೆಯಲ್ಲಿದ್ದ 261 ಜನರ ಪೈಕಿ 188 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 61 ಜನರ ಮೃತದೇಹ ಸಿಕ್ಕಿದೆ. ಉಳಿದವರಿಗಾಗಿ ನೌಕಾಪಡೆ ಹಾಗೂ ವಾಯುಪಡೆ ರಕ್ಷಣಾ‘ ಶೋಧ ಕಾರ್ಯಾಚರಣೆ ಮುಂದುವರೆಸಿದೆ. ಇದೀಗ ರಾಯಗಢ ಸಮುದ್ರ ತೀರಗಳಲ್ಲಿ ಕಂಡು ಬಂದಿರುವ ಕೆಲ ಮೃತದೇಹಗಳು ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದವರದ್ದು ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ರಾಯಗಢದ ಸಮುದ್ರ ತೀರಗಳಲ್ಲಿ ಶವಗಳು ಪತ್ತೆ ಇದನ್ನೂ ಓದಿ: ಬಾರ್ಜ್ P-305 ದುರಂತ: 61 ಮೃತದೇಹಗಳು ಪತ್ತೆ.. ಕೊಳೆತ ಸ್ಥಿತಿಯಲ್ಲಿ ಹಲವು ಶವಗಳು
ಹೀಗಾಗಿ ಈ ಮೃತದೇಹಗಳು ಮೀನುಗಾರರದ್ದೇ ಅಥವಾ ಹಡಗು ದುರಂತದಲ್ಲಿ ಕಾಣೆಯಾದವರದ್ದೇ ಎಂಬುದನ್ನು ಪತ್ತೆ ಹಚ್ಚಲು ರಾಯಗಢ ಜಿಲ್ಲಾಡಳಿತ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಅಧಿಕಾರಿಗಳನ್ನು ಜಿಲ್ಲೆಗೆ ಬರಲು ಸೂಚಿಸಿದೆ. ಒಎನ್‌ಜಿಸಿ ಅಧಿಕಾರಿಗಳು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.