ದೆಹಲಿ: ಈದ್-ಉಲ್-ಫಿತರ್ ಮತ್ತು ಶವ್ವಾಲ್ ತಿಂಗಳ ಅರ್ಧಚಂದ್ರ ಭಾರತದಲ್ಲಿ ಗೋಚರಿಸದ ಕಾರಣ ದೆಹಲಿ, ಯುಪಿ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ಮೇ 3 ರಂದು ಆಚರಿಸಲಾಗುವುದು ಎಂದು ದೃಢಪಡಿಸಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ.
ಮಲೇಷ್ಯಾ ನಾಳೆ ಈದ್ ಆಚರಣೆಗಳನ್ನು ಘೋಷಿಸಿದೆ. ಇದಕ್ಕೂ ಮುನ್ನ ಬ್ರೂನಿ ಮತ್ತು ಫಿಲಿಪೈನ್ಸ್ ಕೂಡ ಭಾನುವಾರ ಈದ್ ಘೋಷಿಸಿದ್ದವು. ಸೌದಿ ಅರೇಬಿಯಾ, ಯುಎಇ, ಬ್ರೂನೈ, ಫಿಲಿಪೈನ್ಸ್, ಕತಾರ್, ಕುವೈತ್, ಬಹ್ರೇನ್, ಜೋರ್ಡಾನ್, ಮೊರಾಕೊ, ಮಸ್ಕತ್, ಯೆಮೆನ್, ಸುಡಾನ್, ಈಜಿಪ್ಟ್, ಟುನೀಶಿಯಾ, ಇರಾಕ್, ಸಿರಿಯಾ, ಪ್ಯಾಲೆಸ್ತೇನ್ ಮತ್ತು ಇತರ ಅರಬ್ ದೇಶಗಳು ನಾಳೆ ಮೇ 2 ರಂದು ಈದ್ ಆಚರಿಸಲು ಸಜ್ಜಾಗಿವೆ. ಈದ್ ಅನ್ನು ಇಸ್ಲಾಮಿಕ್ ಕ್ಯಾಲೆಂಡರ್‌ನ ಹತ್ತನೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಇದನ್ನು ಶವ್ವಾಲ್ ಎಂದು ಕರೆಯಲಾಗುತ್ತದೆ.