ಮಲಪ್ಪುರಂ(ಕೇರಳ): ಸಾಮಾನ್ಯವಾಗಿ ಕೋಳಿ ಮೊಟ್ಟೆ ಇತರೆ ಪಕ್ಷಿಗಳಿಗಿಂತ ದಪ್ಪ ಇರುತ್ತದೆ. ಆದರೆ ಕೇರಳದ ಮಲಪ್ಪುರಂನ ಓರ್ವ ವ್ಯಕ್ತಿ ಸಾಕಿರುವ ಕೋಳಿ ದ್ರಾಕ್ಷಿ ಗಾತ್ರದ ಮೊಟ್ಟೆ ಇಡುವ ಮೂಲಕ ಗಮನ ಸೆಳೆದಿದ್ದು, ಕೋಳಿಯ ಈ ಮೊಟ್ಟೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮಲಪ್ಪುರಂನ ಎಆರ್ ನಗರದ ನಿವಾಸಿ ಸಮದ್ ಎಂಬ ವ್ಯಕ್ತಿ ತಮ್ಮ ಮನೆಯಲ್ಲಿ 5 ವರ್ಷದ ಕೋಳಿಯೊಂದು ಹೀಗೆ ವಿಚಿತ್ರವಾದ ಮೊಟ್ಟೆಗಳನ್ನು ಇಡುತ್ತಿದೆ. ಇದರ ಮೊತ್ತೊಂದು ಅಚ್ಚರಿ ಅಂದ್ರೆ ಕೋಳಿಯ ಈ ಅತಿ ಸಣ್ಣ ಮೊಟ್ಟೆಯಲ್ಲಿ ಹಳದಿ ಬಣ್ಣದಲ್ಲಿರುವ ಲೋಳೆ ಇಲ್ಲ. ಕೇವಲ ಬಿಳಿ ಬಣ್ಣದ ಲೋಳೆ ಮಾತ್ರ ಇದೆ.
ಕೆಲ ದಿನಗಳ ಕಾಲ ಕೋಳಿ ಸಾಮಾನ್ಯ ಗಾತ್ರದ ಮೊಟ್ಟೆಗಳನ್ನು ಇಡುತ್ತಿತ್ತು. ಆದರೆ ದಿನ ಕಳೆಯುತ್ತಿದ್ದಂತೆ ಈ ರೀತಿಯ ಸಣ್ಣ ಮೊಟ್ಟೆಗಳನ್ನು ಇಡುತ್ತಿದೆ. ಈವರೆಗೆ 9 ಚಿಕ್ಕ ಮೊಟ್ಟೆಗಳನ್ನು ಇಟ್ಟಿದೆ ಎಂದು ಸಮದ್ ಹೇಳಿದ್ದಾರೆ.