ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿ ನೇತೃತ್ವದಲ್ಲಿ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿ ಕ್ರಮ: ರಕ್ಷಣಾ ಸಚಿವ ರಾಜನಾಥ್ ಸಿಂಗ್ - ಭಾರತೀಯ ವಾಯುಪಡೆ

ಮೋದಿ ನೇತೃತ್ವದ ಸರ್ಕಾರವು ದೇಶದಲ್ಲಿ ಕ್ರಾಂತಿಕಾರಿ ಸುಧಾರಣೆಗಳಿಗೆ ಬಲವಾದ ಅಡಿಪಾಯ ಹಾಕಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್

By

Published : Jun 26, 2023, 4:03 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) : ಭಾರತ ಹೆಚ್ಚು ಶಕ್ತಿಶಾಲಿಯಾಗುತ್ತಿದೆ. ಅಗತ್ಯವಿದ್ದರೆ ಗಡಿಯ ಈ ಭಾಗದಲ್ಲಿ ಹಾಗೂ ಗಡಿ ದಾಟುವ ಮೂಲಕವೂ ದಾಳಿ ಮಾಡಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಜಮ್ಮು ವಿಶ್ವವಿದ್ಯಾನಿಲಯದಲ್ಲಿ ಭದ್ರತಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 2016 ರಲ್ಲಿ ಗಡಿಯಾಚೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಮತ್ತು 2019 ರಲ್ಲಿ ಬಾಲಾಕೋಟ್ ವೈಮಾನಿಕ ದಾಳಿಯನ್ನು ಉಲ್ಲೇಖಿಸಿದ ಅವರು, ಮೋದಿ ಸರ್ಕಾರದ ನೇತೃತ್ವದಲ್ಲಿ ದೇಶವು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು.

ಭಾರತ ಮೊದಲಿನಂತಿಲ್ಲ. ಹೆಚ್ಚು ಶಕ್ತಿಶಾಲಿಯಾಗುತ್ತಿದೆ: “ಭಾರತ್ ಅಬ್ ಪೆಹ್ಲೆ ಜೈಸಾ ಭಾರತ್ ನಹೀ ರಹಾ. ಭಾರತ ತಾಕತ್ವಾರ್ ಬಂಟ ಜಾ ರಹಾ ಹೈ. ಝರೂರತ್ ಪಡಿ ಟು ಭಾರತ್ ಸೀಮಾ ಕೆ ಇಸ್​ ಪರ್ ಭೀ ಮಾರ್ ಸಕ್ತಾ ಹೈ ಔರ್ ಜರೂರತ್ ಪಡಿ ತೋ ಉಸ್​ ಪಾರ್ ಭೀ ಜಾ ಸಕ್ತಾ ಹೈ (ಭಾರತ ಮೊದಲಿನಂತಿಲ್ಲ. ಹೆಚ್ಚು ಶಕ್ತಿಶಾಲಿಯಾಗುತ್ತಿದೆ. ಬೇಕಾದರೆ ಭಾರತವು ಗಡಿಯ ಈ ಭಾಗದಲ್ಲಿ ಹೊಡೆಯಬಹುದು ಅಥವಾ ಗಡಿಯಾಚೆಗೂ ಹೋಗಬಹುದು" ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಭಯೋತ್ಪಾದನೆಯ ವಿರುದ್ಧ ಪರಿಣಾಮಕಾರಿ ಕ್ರಮವನ್ನು ಪ್ರಾರಂಭಿಸಿದೆ ಮತ್ತು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಅರ್ಥವೇನೆಂದು ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ಮೊದಲ ಬಾರಿಗೆ ತಿಳಿದು ಬಂದಿದೆ’ ಎಂದು ಸಚಿವ ರಾಜನಾಥ್​ ಸಿಂಗ್​ ತಿಳಿಸಿದರು.

“ಪುಲ್ವಾಮಾ ಮತ್ತು ಉರಿ ಎರಡೂ ದುರದೃಷ್ಟಕರ ಘಟನೆಗಳು. ಸರ್ಜಿಕಲ್ ಸ್ಟ್ರೈಕ್ ನಡೆಸುವ ಬಗ್ಗೆ ಪ್ರಧಾನಿ ನಿರ್ಧಾರ ತೆಗೆದುಕೊಳ್ಳಲು ಕೇವಲ 10 ನಿಮಿಷಗಳನ್ನು ತೆಗೆದುಕೊಂಡರು. ಇದು ಅವರ ಬಲವಾದ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ನಮ್ಮ ಪಡೆಗಳು ಈ ಭಾಗದಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸಿದ್ದಲ್ಲದೆ, ಅವರನ್ನು ಮುಗಿಸಲು ಗಡಿಯುದ್ದಕ್ಕೂ ಹೋದವು'' ಎಂದು ಅವರು ಸಭಿಕರ ಚಪ್ಪಾಳೆಗಳ ನಡುವೆ ಹೇಳಿದರು.

ಸೇನೆಯು ಗಡಿಯಾದ್ಯಂತ ಸರ್ಜಿಕಲ್ ಸ್ಟ್ರೈಕ್ ನಡೆಸಿತು: 2016ರ ಸೆಪ್ಟೆಂಬರ್‌ನಲ್ಲಿ ಗಡಿ ಪಟ್ಟಣವಾದ ಉರಿಯ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ 19 ಸೈನಿಕರನ್ನು ಹತ್ಯೆಗೈದಿದ್ದರು. ಹದಿನೈದು ದಿನಗಳ ನಂತರ ಭಾರತೀಯ ಸೇನೆಯು ಗಡಿಯಾದ್ಯಂತ ಸರ್ಜಿಕಲ್ ಸ್ಟ್ರೈಕ್ ನಡೆಸಿತು ಮತ್ತು ಭಯೋತ್ಪಾದಕರ ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಿತು.

ಫೆಬ್ರವರಿ 2019 ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಯೋತ್ಪಾದಕರು ತಮ್ಮ ಬೆಂಗಾವಲು ಪಡೆಯ ಆತ್ಮಾಹುತಿ ದಾಳಿಯಲ್ಲಿ 40 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕೊಂದರು. ದಾಳಿಯ ಹನ್ನೆರಡು ದಿನಗಳ ನಂತರ, ಭಾರತೀಯ ವಾಯುಪಡೆ (ಎಐಎಫ್) ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರವನ್ನು ನಾಶಪಡಿಸಿತು.

ಕ್ರಾಂತಿಕಾರಿ ಸುಧಾರಣೆಗಳಿಗೆ ಬಲವಾದ ಅಡಿಪಾಯ:ಜಮ್ಮು ಮತ್ತು ಕಾಶ್ಮೀರವು ದೀರ್ಘಕಾಲದವರೆಗೆ ಭಯೋತ್ಪಾದನೆಯಿಂದ ಬಳಲುತ್ತಿದೆ. ಭಯೋತ್ಪಾದನೆಯ ವಿಷವು ಸಮಾಜವನ್ನು ಹೇಗೆ ನಾಶ ಮಾಡುತ್ತದೆ ಎಂಬುದು ಇಲ್ಲಿನ ಜನರಿಗೆ ತಿಳಿದಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಮೋದಿ ನೇತೃತ್ವದ ಸರ್ಕಾರವು ದೇಶದಲ್ಲಿ ಕ್ರಾಂತಿಕಾರಿ ಸುಧಾರಣೆಗಳಿಗೆ ಬಲವಾದ ಅಡಿಪಾಯವನ್ನು ಹಾಕಿದೆ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ. ಇದು ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದರು.

2014 ರಲ್ಲಿ ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಸೌಘಂದ್ ಇಸ್ ಮಿಟ್ಟಿ ಕಿ ದೇಶ್ ನಹಿ ಮಿಟ್ನೆ ದೂಂಗಾ, ದೇಶ್ ನಹೀ ಜೂಕ್ನೆ ದೂಂಗಾ (ಈ ದೇಶದ ನೆಲದಲ್ಲಿ ನಾನು ಪ್ರತಿಜ್ಞೆ ಮಾಡುತ್ತೇನೆ, ದೇಶವನ್ನು ಅಳಿಸಿ ಹಾಕಲು ಬಿಡುವುದಿಲ್ಲ. ದೇಶವನ್ನು ನಿಲ್ಲಿಸಲು ಬಿಡುವುದಿಲ್ಲ, ನಾನು ದೇಶವನ್ನು ತಲೆಬಾಗಲು ಬಿಡುವುದಿಲ್ಲ) ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ:Air India pilot: ಕೆಲಸದ ಅವಧಿ ಮುಗಿಯಿತೆಂದು 350 ಪ್ರಯಾಣಿಕರನ್ನು ಅರ್ಧ ದಾರಿಯಲ್ಲೇ ಬಿಟ್ಟ ಏರ್​ ಇಂಡಿಯಾ ಪೈಲಟ್​!

ABOUT THE AUTHOR

...view details