ETV Bharat Karnataka

ಕರ್ನಾಟಕ

karnataka

ETV Bharat / bharat

ಐಐಎಂ - ಜಮ್ಮುವಿನಲ್ಲಿ 'ಆನಂದಂ ಕೇಂದ್ರ' ಉದ್ಘಾಟಿಸಿದ ಸಚಿವ ಪೋಖ್ರಿಯಾಲ್​ - ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್

ಭಾರತೀಯ ಶಿಕ್ಷಣ ಸಂಸ್ಥೆ ಜಮ್ಮುನಲ್ಲಿ ಎಲ್ಲರಿಗೂ ಸಮಗ್ರ ಯೋಗಕ್ಷೇಮವನ್ನು ಸಾಧಿಸುವ ಗುರಿಯನ್ನು ಹೊಂದಿರುವ 'ಆನಂದಂ - ಸಂತೋಷದ ಕೇಂದ್ರ 2020'ನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್​ ಉದ್ಘಾಟಿಸಿದರು.

Education Minister Pokhriyal
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್
author img

By

Published : Mar 31, 2021, 6:17 AM IST

ಶ್ರೀನಗರ( ಜಮ್ಮು -ಕಾಶ್ಮೀರ) :ಭಾರತೀಯ ಶಿಕ್ಷಣ ಸಂಸ್ಥೆ (ಐಐಎಂ) ಜಮ್ಮುನಲ್ಲಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ 'ನಿಶಾಂಕ್ ಆನಂದ ಕೇಂದ್ರ'ವನ್ನು ಉದ್ಘಾಟಿಸಿದರು.

ಶೈಕ್ಷಣಿಕ ಪಠ್ಯಕ್ರಮದಲ್ಲಿ ಆನಂದವನ್ನು ಸೇರಿಸುವುದು ರಾಷ್ಟ್ರ ಸಬಲೀಕರಣಕ್ಕೆ ಬಹಳ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಹೇಳಿದ ಸಚಿವರು, ಈ ಸಾಹಸಕ್ಕೆ ಸಂಸ್ಥೆಯನ್ನು ಅಭಿನಂದಿಸಿದರು.

ಎಲ್ಲರಿಗೂ ಸಮಗ್ರ ಯೋಗಕ್ಷೇಮ ಸಾಧಿಸುವ ಗುರಿ ಹೊಂದಿರುವ 'ಆನಂದಂ - ಸಂತೋಷದ ಕೇಂದ್ರ 2020' ರಾಷ್ಟ್ರೀಯ ಶಿಕ್ಷಣ ನೀತಿ 2020 ರೊಂದಿಗೆ ಹೊಂದಿಸುತ್ತದೆ ಎಂದು ಅವರು ಹೇಳಿದರು.

"ಈ ಹಂತವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇದು ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಾದ ನಳಂದಾ ಮತ್ತು ತಕ್ಷಶಿಲಾಗಳಂತೆಯೇ ಇರುತ್ತದೆ" ಎಂದು ಸಚಿವರು ಹೇಳಿದರು.

ಇದನ್ನು ಓದಿ: ಇಂದು ಭಾರತಕ್ಕೆ ಮತ್ತೆ ಮೂರು ರಫೇಲ್​ ಆಗಮನ... ಐಎಎಫ್‌ಗೆ ಬರಲಿದೆ ಮತ್ತಷ್ಟು ಬಲ

ಈ ಸಂದರ್ಭದಲ್ಲಿ ಹಾಜರಿದ್ದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಯೋಗಕ್ಷೇಮಕ್ಕಾಗಿ ಹೂಡಿಕೆ ಮಾಡಬೇಕು ಎಂದು ಮತ್ತು ಐಐಎಂ ಆನಂದ ಕೇಂದ್ರದ ಮಾದರಿಯನ್ನು ಪುನರಾವರ್ತಿಸುವಂತೆ ಸೂಚಿಸಿದರು.

"ಉನ್ನತ ಶಿಕ್ಷಣ ಸಂಸ್ಥೆಗಳು ಬಾಹ್ಯ ಮತ್ತು ಆಂತರಿಕ ಮಟ್ಟಗಳಲ್ಲಿ ಕೋವಿಡ್ -19 ರ ನಂತರದ ಜಗತ್ತಿಗೆ ತಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರುವಾಗ, ಐಐಎಂ-ಜಮ್ಮುವಿನಲ್ಲಿ ಆನಂದಂ ಕೇಂದ್ರವು ಒತ್ತಡ ರಹಿತ ಕ್ಯಾಂಪಸ್‌ ನಿರ್ಮಾಣ ಮಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ" ಎಂದು ಹೇಳಿದರು.

ಯೋಗ ಮತ್ತು ಫಿಟ್ ಇಂಡಿಯಾ ಚಳವಳಿಯ ಮೂಲಕ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ದಿನಚರಿಯಲ್ಲಿ ಸಮತೋಲನವನ್ನು ತರುವಲ್ಲಿ ಸತತ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಸಿನ್ಹಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ABOUT THE AUTHOR

...view details