ಮುಂಬೈ:ಮಹಿಳೆಯರ ಅಶ್ಲೀಲ ವಿಡಿಯೋ ತಯಾರಿಸಿ ಅವರಿಗೆ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಯುವಕನೊಬ್ಬನನ್ನು ಗುಜರಾತ್ ಪೊಲೀಸರ ಸಹಾಯದಿಂದ ಮುಂಬೈ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ಈತನನ್ನು ಜುಲೈ 29 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿ ಪ್ರಶಾಂತ ಆದಿತ್ಯ (19) ಈತ, ಯುವತಿಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಫೋಟೊಗಳನ್ನು ಕದ್ದು ಅವುಗಳಿಗೆ ಪೋರ್ನ್ ಚಲನಚಿತ್ರದ ಧ್ವನಿಯನ್ನು ಸೇರಿಸಿ ಎಡಿಟ್ ಮಾಡುತ್ತಿದ್ದ. ನಂತರ, ಅವನ್ನು ಮತ್ತೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಅಪ್ಲೋಡ್ ಮಾಡಿ, ಅವನ್ನು ಡಿಲೀಟ್ ಮಾಡಬೇಕಾದರೆ ಹಣ ನೀಡುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಯು ತಾನು ಎಡಿಟ್ ಮಾಡಿದ ಚಿತ್ರ ಡಿಲೀಟ್ ಮಾಡಬೇಕಾದರೆ ಮಹಿಳೆಯರಿಂದ 500 ರಿಂದ 4 ಸಾವಿರ ರೂಪಾಯಿಗಳವರೆಗೆ ಹಣ ಡಿಮ್ಯಾಂಡ್ ಮಾಡುತ್ತಿದ್ದ. ಗುಜರಾತಿನ ಗಾಂಧಿನಗರದವನಾದ ಈತ 10ನೇ ಕ್ಲಾಸು ನಪಾಸಾಗಿದ್ದ. ವಿಚಿತ್ರವೆಂದರೆ ಈತ ಕೇವಲ ತನ್ನ ಜಾತಿಯ ಮಹಿಳೆಯರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದ.