ತಿರುವನಂತಪುರಂ (ಕೇರಳ): ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕರುವನ್ನೂರ್ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ. ಈ ಬ್ಯಾಂಕ್ನಲ್ಲಿ 104 ಕೋಟಿ ರೂಪಾಯಿಗಳ ವಂಚನೆ ಆರೋಪ ಕೇಳಿ ಬಂದಿದೆ. ಹೀಗಾಗಿ ಅಧಿಕಾರಿಗಳು ಬ್ಯಾಂಕ್ ಹಾಗೂ ತ್ರಿಶೂರ್ನಲ್ಲಿರುವ ನಾಲ್ವರು ಆರೋಪಿಗಳ ಮನೆಗಳನ್ನು ಶೋಧಿಸಿ ದಾಖಲೆಗಳನ್ನು ಜಾಲಾಡಿದ್ದಾರೆ.
₹104 ಕೋಟಿ ವಂಚನೆ ಆರೋಪ ಹೊತ್ತ ಕೇರಳದ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಇಡಿ ದಾಳಿ
ಕರುವನ್ನೂರ್ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 104 ಕೋಟಿ ರೂಪಾಯಿಗಳ ವಂಚನೆ ಆರೋಪ ಸಂಬಂಧ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
104 ಕೋಟಿ ವಂಚನೆ ಆರೋಪ: ಕೇರಳದ ಕೋ ಆಪರೇಟಿವ್ ಬ್ಯಾಂಕ್ ಮೇಲೆ ಇಡಿ ದಾಳಿ
2017ರಲ್ಲಿ ಈ ಬ್ಯಾಂಕ್ನಲ್ಲಿ ವಂಚನೆ ನಡೆದಿರುವ ಬಗ್ಗೆ ಮೊದಲ ಮಾಹಿತಿ ಹೊರಬಿದ್ದಿತ್ತು. ಆರೋಪಿಗಳು ಬ್ಯಾಂಕ್ನಿಂದ ಹಣ ಕದ್ದು, ಅದೇ ಹಣವನ್ನು ಬೇನಾಮಿ ಠೇವಣಿ ಇಟ್ಟು ವಂಚಿಸಿದ್ದಾರೆ ಎನ್ನಲಾಗಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಗ್ರಾಹಕರು ತಮ್ಮ ಠೇವಣಿ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.
ಇದನ್ನೂ ಓದಿ:ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ