ಔರಂಗಾಬಾದ್ :ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಸಂಬಂಧಿಸಿದಂತೆ ನಡೆದಿರುವ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನ ಮೂರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಶೋಧ ನಡೆಸಿತು. ಈ ಸಂಬಂಧ ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಪೊಲೀಸರಿಗೆ ದೂರು ನೀಡಿದ್ದು, ಮೂರು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಔರಂಗಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಡೆಪ್ಯುಟಿ ಕಮಿಷನರ್ ಅಪರ್ಣಾ ಥೀಟೆ ಅವರು ಸಲ್ಲಿಸಿದ ದೂರಿನ ಪ್ರಕಾರ, ಸಮರ್ಥ್ ಕನ್ಸ್ಟ್ರಕ್ಷನ್, ಜಾಗ್ವಾರ್ ಗ್ಲೋಬಲ್ ಸರ್ವಿಸಸ್ ಮತ್ತು ಇಂಡೋ-ಎಲ್ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಒಂದೇ ಕಂಪ್ಯೂಟರ್‌ನಿಂದ ತಮ್ಮ ಇ-ಟೆಂಡರ್‌ಗಳನ್ನು ಸಲ್ಲಿಸಿವೆ. ಇದು ಮಹಾನಗರ ಪಾಲಿಕೆಯ ನಿಯಮಗಳು ಮತ್ತು ಷರತ್ತುಗಳಿಗೆ ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಮಹಾನಗರ ಪಾಲಿಕೆ, ನಗರಸಭೆ ಹಾಗೂ ಸರಕಾರಕ್ಕೆ ವಂಚನೆ ಎಸಗಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ :ಸಿಕ್ಕಿಂನಲ್ಲಿ ಭಾರಿ ಹಿಮಪಾತ.. 15 ಕಿ.ಮೀಟ್ರಾಫಿಕ್ ಜಾಮ್, ಒಂದು ಸಾವಿರ ಪ್ರವಾಸಿಗರನ್ನ ರಕ್ಷಿಸಿದ ಸೇನೆ
PMJAY ಯೋಜನೆ ಪ್ರಾರಂಭಿಸಲು ನಾಲ್ಕು ಟೆಂಡರ್ : ಕುತೂಹಲಕಾರಿ ಸಂಗತಿಯೆಂದರೆ, ಈ ಮೂರು ಕಂಪನಿಗಳ ಆರ್ಥಿಕ ಸಾಮರ್ಥ್ಯದ ಕೊರತೆಯಿಂದಾಗಿ ಮಹಾನಗರ ಪಾಲಿಕೆಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಜಾರಿಗೆ ಬರಲಿಲ್ಲ. ದೂರಿನ ಪ್ರಕಾರ, ನಾಲ್ಕು ಸ್ಥಳಗಳಲ್ಲಿ PMJAY ಯೋಜನೆಯನ್ನು ಪ್ರಾರಂಭಿಸಲು ನಾಲ್ಕು ಟೆಂಡರ್‌ಗಳನ್ನು ಕರೆಯಲಾಯಿತು. ಮೂರು ಕಂಪನಿಗಳು ಶಾಮೀಲಾಗಿ ಮೂರು ಟೆಂಡರ್‌ಗಳನ್ನು ಸಲ್ಲಿಸಿದ್ದರೆ, ಟೆಂಡರ್ ಸಲ್ಲಿಸಿದ ಮತ್ತೊಂದು ಕಂಪನಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.