ಮುಂಬೈ: ಶಿವಸೇನೆ ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಡಿ ತಂಡ ಬೆಳಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಮನೆಗೆ ಬಂದು ದಾಳಿ ಆರಂಭಿಸಿತ್ತು. ರಾವತ್ ಪ್ರಸ್ತುತ ಪತ್ರಾಚಲ್ ಪ್ರಕರಣದಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಭಾಂಡೂಪ್‌ನಲ್ಲಿರುವ ಅವರ ಮೈತ್ರಿ ಮನೆಯಲ್ಲಿ ತನಿಖೆ ನಡೆಸಲಾಗಿದೆ.
ಸಂಜಯ್ ರಾವತ್ ಮೇಲೆ ದಾಳಿ.. ಶಿವಸೇನಾ ವಕ್ತಾರ ಇಡಿ ವಶಕ್ಕೆ - etv bharat kannada
ಇಡಿ ತಂಡ ಬೆಳಗ್ಗೆ ಶಿವಸೇನಾ ಸಂಸದ ಸಂಜಯ್ ರಾವತ್ ಮನೆಗೆ ಬಂದು ದಾಳಿ ಆರಂಭಿಸಿತ್ತು.
ED preparation for detain Sanjay Raut
ಸಂಜಯ್ ರಾವತ್ ಅವರ ಪತ್ನಿ ವರ್ಷಾ ಮತ್ತು ಸಹೋದರ ಸುನೀಲ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಪತ್ರಾಚಲ್ ಪ್ರಕರಣದಲ್ಲಿ ಶಿವಸೇನೆ ನಾಯಕ ಸಂಜಯ್ ರಾವತ್ ಅವರನ್ನು ಒಂಬತ್ತು ಗಂಟೆಗಳ ವಿಚಾರಣೆಯ ನಂತರ ಇಡಿ ಅಂತಿಮವಾಗಿ ವಶಕ್ಕೆ ಪಡೆದಿದೆ.