ಕರ್ನಾಟಕ

karnataka

ETV Bharat / bharat

ಚಿನ್ನ ಕಳ್ಳಸಾಗಣೆ ಹಗರಣ: ಸ್ವಪ್ನಾ ಸುರೇಶ್‌ಗೆ​ 6 ಗಂಟೆ ಇಡಿ ಡ್ರಿಲ್‌, ನಾಳೆಗೂ ಮುಂದುವರಿಕೆ - ಚಿನ್ನ ಕಳ್ಳಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​

ಅರಬ್​ ದೇಶದಿಂದ 30 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಹಗರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಅವರನ್ನು ಇಡಿ ಅಧಿಕಾರಿಗಳು ಇಂದು 6 ಗಂಟೆಗಳ ಕಾಲ ವಿಚಾರಣೆ ನಡೆಸಿ, ನಾಳೆಗೂ ಹಾಜರಾಗಲು ಸೂಚಿಸಿದ್ದಾರೆ.

6 ಗಂಟೆ ಸ್ವಪ್ನಾ ಸುರೇಶ್​ ವಿಚಾರಣೆ ನಡೆಸಿದ ಇಡಿ
6 ಗಂಟೆ ಸ್ವಪ್ನಾ ಸುರೇಶ್​ ವಿಚಾರಣೆ ನಡೆಸಿದ ಇಡಿ6 ಗಂಟೆ ಸ್ವಪ್ನಾ ಸುರೇಶ್​ ವಿಚಾರಣೆ ನಡೆಸಿದ ಇಡಿ

By

Published : Jun 22, 2022, 5:51 PM IST

ನವದೆಹಲಿ:ಕೇರಳದಲ್ಲಿ ಕೋಲಾಹಲ ಎಬ್ಬಿಸಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ಹಗರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿರುವ ಸ್ವಪ್ನಾ, ಈ ಬಗ್ಗೆ ಹೇಳಿಕೆ ನೀಡಲು ಇ.ಡಿ. ವಿಚಾರಣೆ ನಡೆಸಿದೆ.

ಸ್ವಪ್ನಾರ ಆರೋಪವೇನು:ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ಸ್ವಪ್ನಾ ಅವರು, ಸಿಎಂ ಪಿಣರಾಯಿ ವಿಜಯನ್​ ಮತ್ತು ಅವರ ಕುಟುಂಬಸ್ಥರ ವಿರುದ್ಧ ಹಗರಣದಲ್ಲಿ ಭಾಗಿಯಾದ ಆರೋಪ ಹೊರಿಸಿದ್ದಾರೆ. ಇದು ರಾಜ್ಯದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ಹಗರಣದಲ್ಲಿ ಭಾಗಿ ಆರೋಪದ ಕಾರಣ ಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ನಡೆಸುತ್ತಿವೆ.

ಏನಿದು ಪ್ರಕರಣ?:ಜು.5, 2020ರಲ್ಲಿ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು 15 ಕೋಟಿ ರೂ. ಮೌಲ್ಯದ 30 ಕೆಜಿ ಚಿನ್ನ ಇದ್ದ ಬ್ಯಾಗ್ ವಶಕ್ಕೆ ಪಡೆದಿದ್ದರು. ಯುಎಇ ದೂತಾವಾಸ ಕಚೇರಿಯ ಬ್ಯಾಗೇಜ್ ವಿಳಾಸ ಹೊಂದಿದ್ದ ಬ್ಯಾಗ್‌ನಲ್ಲಿ ಈ ಚಿನ್ನ ಪತ್ತೆಯಾಗಿತ್ತು.

ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪ..1000ಕ್ಕೂ ಹೆಚ್ಚು ಜನ ಸಾವು, ಅವಶೇಷಗಳಡಿ ಸಿಲುಕಿದ ನೂರಾರು ಜನ!

ABOUT THE AUTHOR

...view details