ಕರ್ನೂಲ್ ( ಅಂಧ್ರ ಪ್ರದೇಶ):ಜಿಲ್ಲೆಯ ನಂದ್ಯಾಲ್, ಕನಾಲ ಮತ್ತು ಅಯ್ಯಲೂರು ಗ್ರಾಮಗಳಲ್ಲಿ ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಆರ್ಎಸ್ಎಸ್ ಮತ್ತು ಬಿಜೆಪಿ ಉದ್ದೇಶಪೂರ್ವಕವಾಗಿ ಇಡಿ ದಾಳಿ ಮಾಡಿಸುತ್ತಿದೆ ಎಂದು ಪಿಎಫ್ಐ ಕಾರ್ಯಕರ್ತರು ಆರೋಪಿಸಿದ್ದು, ಇಡಿ ಅಧಿಕಾರಿಗಳೊಂದಿಗೆ ಬಂದಿದ್ದ ಪೊಲೀಸರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು.
ಓದಿ : 2019-2020 ರಲ್ಲಿ 15.5 ಲಕ್ಷ ಸೈಬರ್ ಸುರಕ್ಷತಾ ಘಟನೆಗಳು: ಲೋಕಸಭೆಗೆ ಕೇಂದ್ರದ ಮಾಹಿತಿ
ಎಮ್ಮಿಗನೂರಿನಲ್ಲಿ ಶೋಧ:ಕರ್ನೂಲ್ ಜಿಲ್ಲೆಯ ಎಮ್ಮಿಗನೂರಿನ ಮೊಹಮ್ಮದ್ ರಸೂಲ್ ಎಂಬ ಪಿಎಫ್ಐ ಕಾರ್ಯಕರ್ತನ ಮನೆ ಮೇಲೆ ಇಡಿ ದಾಳಿ ಮಾಡಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶೋಧ ನಡೆಸಿದೆ. ಪಿಎಫ್ಐ ಕಾರ್ಯಕರ್ತ ರಸೂಲ್ ಅರಬ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದ. ಈತನ ಬ್ಯಾಂಕ್ ಖಾತೆ ಮೂಲಕ ಹೆಚ್ಚಿನ ಹಣದ ವಹಿವಾಟುಗಳು ನಡೆದಿರುವುದರಿಂದ ಶೋಧ ನಡೆಸಲಾಗಿದೆ. ಇಡಿ ಕಾರ್ಯಾಚರಣೆ ವೇಳೆ ಕೇಂದ್ರ ಪಡೆ ಮತ್ತು ಸ್ಥಳೀಯ ಪೊಲೀಸರು ಭದ್ರತೆ ನೀಡಿದರು.