ಕರ್ನಾಟಕ

karnataka

ETV Bharat / bharat

ಅಕ್ರಮ ಹಣ ವರ್ಗಾವಣೆ ಪ್ರಕರಣ: ಫಾರೂಖ್​​ ಅಬ್ದುಲ್ಲಾ ವಿರುದ್ಧ ಚಾರ್ಜ್​ಶೀಟ್​​

ಅಕ್ರಮ ಹಣ ವರ್ಗಾವಣೆ ಕೇಸ್​ಗೆ ಸಂಬಂಧಿಸಿದಂತೆ ಜಮ್ಮು- ಕಾಶ್ಮೀರ ಮಾಜಿ ಸಿಎಂ ಫಾರೂಖ್​ ಅಬ್ದುಲ್ಲಾ ವಿರುದ್ಧ ಇದೀಗ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ.

ED files chargesheet against Farooq Abdullah
ED files chargesheet against Farooq Abdullah

By

Published : Jul 26, 2022, 4:55 PM IST

ನವದೆಹಲಿ:ಜಮ್ಮು- ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್​​​ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆಗೊಳಪಟ್ಟಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ವಿರುದ್ಧ ಇಂದು ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಕಾರಣ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್​ ಅಬ್ದುಲ್ಲಾ ವಿರುದ್ಧ ಜಾರಿ ನಿರ್ದೇಶನಾಯಲದಿಂದ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. 84 ವರ್ಷದ ಫಾರೂಖ್​​ ಅಬ್ದುಲ್ಲಾ ಜಾರಿ ನಿರ್ದೇಶನಾಲಯದಿಂದ ಅನೇಕ ಸಲ ಪ್ರಶ್ನೆಗೊಳಪಟ್ಟಿದ್ದು, ಕೊನೆಯದಾಗಿ 2022ರ ಮೇ. 31ರಂದು ಅವರನ್ನ ವಿಚಾರಣೆ ನಡೆಸಲಾಗಿತ್ತು.

ಇದನ್ನೂ ಓದಿರಿ:ಟೀಂ ಇಂಡಿಯಾದಲ್ಲಿ ವಿರಾಟ್​​ ಸ್ಥಾನ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ರಾಬಿನ್ ಉತ್ತಪ್ಪ

ಮೂರು ಅವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿರುವ ಫಾರೂಖ್​​ ಅಬ್ದುಲ್ಲಾ 2019ರಲ್ಲಿ ಇಡಿಯಿಂದ ವಿಚಾರಣೆಗೊಳಪಟ್ಟಿದ್ದರು. ಇದಾದ ಬಳಿಕ 2020ರ ಡಿಸೆಂಬರ್ ತಿಂಗಳಲ್ಲಿ ಅಬ್ದುಲ್ಲಾ ಅವರಿಗೆ ಸೇರಿದ್ದ 11.86 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ಕಾಶ್ಮೀರ್ ಕ್ರಿಕೆಟ್​ ಅಸೋಸಿಯೇಷನ್​​​ ಅಧ್ಯಕ್ಷರಾಗಿದ್ದ ವೇಳೆ ಫಾರೂಖ್​ ಅಬ್ದುಲ್ಲಾ ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡಿದ್ದರು. ಜೊತೆಗೆ ಕ್ರೀಡಾ ಸಂಸ್ಥೆಯಲ್ಲಿ ಅಕ್ರಮವಾಗಿ ನೇಮಕಾತಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ABOUT THE AUTHOR

...view details