ವಿಜಯವಾಡ: ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನ ಜಾರಿ ನಿರ್ದೇಶನಾಲಯ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ನೋಟಿಸ್ ಜಾರಿ ಮಾಡಿದೆ. ಜನವರಿ 11ರಂದು ನ್ಯಾಯಾಲಯದ ವಿಚಾರಣೆಗೆ ಹಾಜರಾಗುವಂತೆ ತಳಿಸಲಾಗಿದೆ.
ಭೂ ಹಂಚಿಕೆ ಪ್ರಕರಣ: ಇಡಿ ವಿಶೇಷ ನ್ಯಾಯಾಲಯದಿಂದ ಆಂಧ್ರ ಸಿಎಂಗೆ ನೋಟಿಸ್! - ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್
ಅಕ್ರಮವಾಗಿ ಭೂ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಗೆ ಜಾರಿ ನಿರ್ದೇಶನಾಲಯದಿಂದ ನೋಟಿಸ್ ಜಾರಿಗೊಂಡಿದೆ.
ಅರಬಿಂದೋ ಫಾರ್ಮ್ ಹಾಗೂ ಹೆಟ್ರೋ ಔಷಧಿ ಭೂ ಹಂಚಿಕೆ ಪ್ರಕರಣದ ಚಾರ್ಜ್ಶೀಟ್ ಈ ಹಿಂದೆ ನಾಂಪಲ್ಲಿ ಮೆಟ್ರೋಪಾಲಿಟನ್ ಸೆಷನ್ಸ್ ಕೋರ್ಟ್ಗೆ ಸಲ್ಲಿಸಲಾಗಿತ್ತು. ಈ ಪ್ರಕರಣ ಇದೀಗ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಂಡಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಜಗನ್ ಮೋಹನ್ ರೆಡ್ಡಿ ಜತೆಗೆ ಸಂಸದ ವಿಜಯ್ ಸಾಯಿ ರೆಡ್ಡಿ, ಹೆಟ್ರೋ ಡ್ರಗ್ಸ್ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ಅರಬಿಂದೋ ಫಾರ್ಮಾ ಎಂಡಿ ನಿತ್ಯಾನಂದ ರೆಡ್ಡಿ, ಪಿ.ವಿ.ರಾಮ್ಪ್ರಸಾದ್ ರೆಡ್ಡಿ, ಟೈಡೆಂಟ್ ಲೈಫ್ ಸೈನ್ಸಸ್ ನಿರ್ದೇಶಕ ಚಂದ್ರ ರೆಡ್ಡಿ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಪಿ.ಆಚಾರ್ಯರಿಗೆ ಸಮನ್ಸ್ ಜಾರಿಗೊಳಿಸಿದೆ. 75 ಎಕರೆ ಜಮೀನು ಎಕರೆಗೆ 7 ಲಕ್ಷ ರೂ.ಗೆ ಮಂಜೂರು ಮಾಡಿದ್ದು, ಇದು ಸಮಿತಿಯ ನಿರ್ಧಾರಕ್ಕೆ ವಿರುದ್ಧವಾಗಿದೆ ಎನ್ನಲಾಗಿದೆ. 2004-2009ರ ಅವಧಿಯಲ್ಲಿ ವೈಎಸ್ಆರ್ ಸರ್ಕಾರ ಅಸ್ತಿತ್ವದಲ್ಲಿದ್ದ ಸಮಯದಲ್ಲಿ ಈ ಪ್ರಕರಣ ನಡೆದಿದ್ದು, ಆ ವೇಳೆ ಸರ್ಕಾರದ ಬೆಲೆ ನಿರ್ಧಾರ ಸಮಿತಿ ನಿರ್ಧಾರಕ್ಕೆ ವಿರುದ್ಧವಾಗಿ ಭೂಮಿ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ.