ನವದೆಹಲಿ :ಕಪ್ಪು ಹಣ ಮತ್ತು ತೆರಿಗೆ ವಿಧಿಸುವ ಕಾಯ್ದೆ-2015ರ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ಸುಂದ್ರು ಭಗವಾನ್ ದಾಸ್ ಹಿರಾನಂದಾನಿ ಮತ್ತು ಆರ್ ಪಿ ಮನ್ಸಿಂಗ್ಕಾ ಸೇರಿದಂತೆ ಹಲವರ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಸುಮಾರು 3.27 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಂದ್ರು ಭಗವಾನ್ ದಾಸ್ ಹಿರಾನಂದಾನಿ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಬಹಿರಂಗಪಡಿಸಿದ ಆಸ್ತಿ ಹೊಂದಿದೆ. ಬ್ಯಾಂಕ್ ಖಾತೆ ಸಿಂಗಾಪುರದಲ್ಲಿತ್ತು ಎಂದು ಹೇಳಲಾಗಿತ್ತು.