ನವದೆಹಲಿ :ಭಾರತ-ಬಾಂಗ್ಲಾದೇಶದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾನುವಾರು ಕಳ್ಳಸಾಗಣೆ ದಂಧೆಕೋರ, ಪ್ರಮುಖ ಆರೋಪಿ ಎಂಡಿ ಇನಾಮುಲ್ ಹಕ್ ಎಂಬುವನನ್ನು ಪಶ್ಚಿಮ ಬಂಗಾಳದ ಗಡಿ ಪ್ರದೇಶದಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಬಂಧಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿ ಹಕ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜಾರಿ ನಿರ್ದೇಶನಾಲಯ ತನ್ನ ಕಸ್ಟಡಿಗೆ ಕೋರಲಿದೆ ಎಂದು ಗೊತ್ತಾಗಿದೆ.
ಇನ್ನು ಇದೇ ಪ್ರಕರಣದ ಸ್ವತಂತ್ರ ತನಿಖೆಯ ಭಾಗವಾಗಿ 2020ರ ನವೆಂಬರ್‌ನಲ್ಲಿ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಹಕ್ರನ್ನು ಬಂಧಿಸಿತ್ತು. ಕಳೆದ ತಿಂಗಳು ಸುಪ್ರೀಂಕೋರ್ಟ್ ಹಕ್ಗೆ ಜಾಮೀನು ನೀಡಿತ್ತು.