ನವದೆಹಲಿ:ಪಶ್ಚಿಮ ಬಂಗಾಳದ ಉಳಿದೆಲ್ಲಾ ಹಂತದ ಚುನಾವಣೆಯನ್ನು ಒಂದೇ ಬಾರಿ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕೊರೊನಾ ಹಚ್ಚಳವಾಗುತ್ತಿರುವ ನಡುವೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಕಚೇರಿ (ಸಿಇಒ) ಸರ್ವಪಕ್ಷ ಸಭೆ ಕರೆದು ಎಲ್ಲ ರಾಜಕೀಯ ಪಕ್ಷಗಳು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಕಳೆದ ವಾರ ಚುನಾವಣಾ ಆಯೋಗವು ಎಲ್ಲ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಿಗೆ ಸಾರ್ವಜನಿಕ ಸಭೆಗಳು, ರ‍್ಯಾಲಿಗಳು ಮತ್ತು ಇತರ ಚಟುವಟಿಕೆಗಳಲ್ಲಿ ಕೋವಿಡ್ಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿಕೊಂಡಿತ್ತು. ಆಯೋಗವು ಸಾರ್ವಜನಿಕ ಸಭೆಗಳಲ್ಲಿ ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು ಹಾಗೂ ಅಂತರ ಕಾಪಾಡಿಕೊಳ್ಳುವ ಬಗ್ಗೆ ಗಮನ ಹರಿಸುವಂತೆ ಹೇಳಿತ್ತು.
ಒಟ್ಟು 8 ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈಗಾಗಲೇ 5ನೇ ಹಂತದ ಪ್ರಚಾರ ಕಾರ್ಯ ಅಂತ್ಯಗೊಂಡಿದೆ.