ಹೈದರಾಬಾದ್:ರುಚಿಕರವಾದ ಊಟ ಮಾಡುವುದು ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಜನಪ್ರಿಯ ಚಟುವಟಿಕೆಯಾಗಿದೆ. ಆದರೆ, ನಾಲಿಗೆ ಮುದ ನೀಡುವ ಈ ಚಟುವಟಿಕೆಯನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಂಶೋಧಕರ ತಂಡ ತಿಳಿಸಿದ್ದು, ನಿರಂತರವಾಗಿ ಊಟ ಮಾಡುವುದು ಸಾವಿನ ಅಪಾಯವನ್ನು ಹೆಚ್ಚಿಸಲಿದೆ ಎಂದು ಎಚ್ಚರಿಸಿದ್ದಾರೆ.
ಜರ್ನಲ್ ಆಫ್ ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆಚ್ಚಾಗಿ ಆಹಾರವನ್ನು ಸೇವಿಸುವವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಅದರಲ್ಲಿ ಭಾಗವಹಿಸಿದವರಲ್ಲಿ 2,781 ಸಾವುಗಳು ಸಂಭವಿಸಿವೆ. ಇದರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ 511 ಸಾವು ಮತ್ತು ಕ್ಯಾನ್ಸರ್ನಿಂದ 638 ಸಾವುಗಳು ಸಂಭವಿಸಿವೆ ಎಂಬ ಆಘಾತಕಾರಿ ಸುದ್ದಿಯನ್ನು ಹೊರ ತಂದಿದೆ.
ಅಮೆರಿಕದಾದ್ಯಂತ ಯುವ ಸಮುದಾಯದ ಮಾದರಿಯನ್ನು ಸಂಗ್ರಹಿಸಿದ್ದು, ಮನೆಯಿಂದ ಹೊರಗಡೆ ತಯಾರಾಗುವ ಆಹಾರವನ್ನು ಹೆಚ್ಚಾಗಿ ಸೇವಿಸುವವರಲ್ಲಿ ಮರಣದ ಪ್ರಮಾಣ ಹೆಚ್ಚಾಗುತ್ತಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಅಯೋವಾ ವಿಶ್ವವಿದ್ಯಾಲಯದ ಸಂಶೋಧಕ ಯಾಂಗ್ ಡು ಹೇಳಿದ್ದಾರೆ.
ಕೆಲವು ರೆಸ್ಟೋರೆಂಟ್‌ಗಳು ಉತ್ತಮ-ಗುಣಮಟ್ಟದ ಆಹಾರವನ್ನು ಒದಗಿಸುತ್ತವೆಯಾದರೂ, ಮನೆಯಲ್ಲಿ ತಯಾರಿಸಿದ ಊಟಕ್ಕೆ ಹೋಲಿಸಿದರೆ ಅವುಗಳ ಗುಣಮಟ್ಟದ ಪ್ರಮಾಣ ಕಡಿಮೆ ಇರುತ್ತದೆ. ಮನೆಯಿಂದ ಹೊರಗೆ ಸೇವಿಸುವ ಊಟದಲ್ಲಿ ಶಕ್ತಿಯ ಸಾಂದ್ರತೆ, ಕೊಬ್ಬು ಮತ್ತು ಸೋಡಿಯಂ ಹೆಚ್ಚಿರುತ್ತದೆ. ಆದರೆ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಫೈಬರ್ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಎಂದು ಪುರಾವೆಗಳು ತೋರಿಸಿವೆ ಎಂದರು.
1994-2014ರ ಅವಧಿಯಲ್ಲಿ ನಡೆದ ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಠಿಕಾಂಶ ಪರೀಕ್ಷಾ ಸಮೀಕ್ಷೆಯಲ್ಲಿ 20 ವರ್ಷದ ಸುಮಾರು 35.084 ಜನರನ್ನು ಸಂದರ್ಶನ ಮಾಡಲಾಗಿದ್ದು, ಇಲ್ಲಿನ ಮಾಹಿತಿ ಪ್ರಕಾರ, 2,781 ಸಾವುಗಳು ಸಂಭವಿಸಿವೆ. ಇದರಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ 511 ಸಾವುಗಳು ಮತ್ತು ಕ್ಯಾನ್ಸರ್ನಿಂದ 638 ಸಾವುಗಳು ಸಂಭವಿಸಿವೆ.
ನಿರಂತರವಾಗಿ ಊಟ ಮಾಡುವುದು ಇತರ ಆರೋಗ್ಯ ಸಮಸ್ಯೆಗಳಾದ ಬೊಜ್ಜು,ಮಧುಮೇಹ ಮತ್ತು ಇತರ ದೀರ್ಘಕಾಲದ ಕಾಯಿಲೆಗಳ ಬಯೋಮಾರ್ಕರ್‌ಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವಿದೆ ಎಂದು ಪುರಾವೆಗಳು ಸೂಚಿಸುತ್ತವೆ ಎಂದು ವಾರ್ಸಿಟಿಯ ಪ್ರಮುಖ ತನಿಖಾಧಿಕಾರಿ ವೀ ಬಾವೊ ಹೇಳಿದ್ದಾರೆ.