ಕರ್ನಾಟಕ

karnataka

ETV Bharat / bharat

ಯಾಸ್ ಚಂಡಮಾರುತ: ಪೂರ್ವ ವಲಯ ರೈಲ್ವೆಯಿಂದ 25 ರೈಲುಗಳ ಓಡಾಟ ಸ್ಥಗಿತ - ಪೂರ್ವ ರೈಲ್ವೆಯಿಂದ ರೈಲು ಸ್ಥಗಿತ

ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಯಾಸ್ ಚಂಡಮಾರುತ ಒಡಿಶಾ, ಪಶ್ಚಿಮ ಬಂಗಾಳದ ಕರಾವಳಿಗಳಲ್ಲಿ ಅವಾಂತರ ಸೃಷ್ಟಿಸುವ ಸಾಧ್ಯತೆಯಿದೆ. ಈಗಾಗಲೇ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಪ್ರಕೃತಿ ವಿಕೋಪ ಎದುರಿಸಲು ಸಕಲ ಸಿದ್ದತೆ ಮಾಡಿಕೊಂಡಿವೆ. ರೈಲ್ವೆ ಇಲಾಖೆಯ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ.

Eastern Railway suspends trains
ರೈಲುಗಳ ಓಡಾಟ ಸ್ಥಗಿತ

By

Published : May 24, 2021, 11:10 AM IST

ನವದೆಹಲಿ: ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಮೇ 24 ರಿಂದ 29 ರವರೆಗೆ ಒಟ್ಟು 25 ರೈಲು ಓಡಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೂರ್ವ ವಲಯ ರೈಲ್ವೆ ತಿಳಿಸಿದೆ. ಈ ಬಗ್ಗೆ ರೈಲ್ವೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಸ್ಥಗಿತಗೊಳ್ಳಲಿರುವ ರೈಲುಗಳ ಮಾಹಿತಿಯನ್ನು ನೀಡಿದೆ.

ಗುವಾಹಟಿ- ಬೆಂಗಳೂರು, ಮುಝಫ್ಪರ್​ಪುರ್​- ಯಶವಂತಪುರ, ಎರ್ನಾಕುಲಂ-ಪಾಟ್ನಾ, ನ್ಯೂ ಟಿನ್ಸುಕಿಯಾ -ತಂಬರಂ, ಭಾಗಲ್ಪುರ್- ಯಶವಂತಪುರ ಸೇರಿದಂತೆ ಇತರ ರೈಲುಗಳ ಓಡಾಟ ಸ್ಥಗಿತಗೊಳ್ಳಲಿದೆ

ಸ್ಥಗಿತಗೊಳ್ಳಲಿರುವ ರೈಲುಗಳ ವಿವರ

ಯಾಸ್ ಚಂಡಮಾರುತದಿಂದ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಒತ್ತಡದಿಂದ ತೀರ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗಂಟೆಗೆ ಅಂದಾಜು 155 ರಿಂದ 165 ಕಿ.ಮೀ ವೇಗದಲ್ಲಿ ಬೀಸುವ ಚಂಡಮಾರುತವು, ಮೇ 26 ರ ಸಂಜೆ ಒಡಿಶಾದ ಪ್ಯಾರಾಡಿಪ್ ಮತ್ತು ಪಶ್ಚಿಮ ಬಂಗಾಳದ ಸಾಗರ್ ದ್ವೀಪದ ನಡುವೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಡಾ. ಮೃತ್ಯುಂಜಯ ಮೋಹಪಾತ್ರ ತಿಳಿಸಿದ್ದಾರೆ.

ಇದನ್ನೂಓದಿ: ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ: ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

ಯಾಸ್ ಚಂಡಮಾರುತ ತೌಕ್ತೆ ಮತ್ತು ಆಂಫಾನ್ ಚಂಡುಮಾರುತಗಳಂತೆ ಬೀಸಲಿದ್ದು, ತೀರ ಪ್ರದೇಶಗಳಲ್ಲಿ ಭಾರೀ ಹಾನಿ ಉಂಟು ಮಾಡಲಿದೆ ಎಂದು ಮೋಹಪಾತ್ರ ಮುನ್ನೆಚ್ಚರಿಕೆ ನೀಡಿದ್ದಾರೆ.

ಈ ನಡುವೆ ಭಾನುವಾರ ಕೇಂದ್ರ, ರಾಜ್ಯ ಸಚಿವರ ಮತ್ತು ಇತರ ಇಲಾಖೆಗಳ ಪ್ರಮುಖರ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದರು.

ABOUT THE AUTHOR

...view details