ನವದೆಹಲಿ :ಮನುಷ್ಯನಿಗೆ ಅನಾರೋಗ್ಯ ಉಂಟಾದಾಗ ತುರ್ತು ಚಿಕಿತ್ಸೆಗಾಗಿ ಸರ್ಕಾರಗಳು ಆ್ಯಂಬುಲೆನ್ಸ್ ಸೇವೆ ಆರಂಭಿಸಿವೆ. ದೆಹಲಿ ಪೂರ್ವ ಮಹಾನಗರ ಪಾಲಿಕೆ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಮರಗಳಿಗೂ ಚಿಕಿತ್ಸೆ ನೀಡಲು ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಆರಂಭಿಸಿದೆ. ಆಶ್ವರ್ಯವಾದರೂ ನಿಜ. ಪೂರ್ವ ದೆಹಲಿ ಮಹಾನಗರ ಪಾಲಿಕೆ ಒಣಗುತ್ತಿರುವ ಮರಗಳಿಗೆ ಚಿಕಿತ್ಸೆ ನೀಡುವ ಹೊಸ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಉಚಿತ ಆ್ಯಂಬುಲೆನ್ಸ್ ಕಾರ್ಯಕ್ರಮ ಜಾರಿ ಮಾಡಿದೆ.
ದೆಹಲಿಯಲ್ಲಿ ಶುದ್ಧ ಗಾಳಿಯ ಕೊರತೆ ವಿಪರೀತವಾದ ಕಾರಣ ಹೈಕೋರ್ಟ್ನ ನಿರ್ದೇಶನದ ಮೇರೆಗೆ ಈ ಯೋಜನೆ ರೂಪಿಸಲಾಗಿದೆ. ಅದರಂತೆ ರಾಜ್ಯದಲ್ಲಿ ಎಲ್ಲೆಲ್ಲಿ ಮರಗಳು ಒಣಗಿವೆ ಎಂಬುದನ್ನು ಗುರುತಿಸಿ, ಆ ಸ್ಥಳಕ್ಕೆ ತೆರಳಿ ಮರಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಪಾಲಿಕೆಯ ತೋಟಗಾರಿಕಾ ಇಲಾಖೆ ನೌಕರರಿಗೆ ವಿಶೇಷ ತರಬೇತಿಯನ್ನೂ ನೀಡಲಾಗಿದೆ.