ಡೆಹ್ರಾಡೂನ್(ಉತ್ತರಾಖಂಡ್):ಹಿಮ ಪ್ರವಾಹದಿಂದ ಕಂಗೆಟ್ಟಿದ್ದ ಉತ್ತರಾಖಂಡ್ ರಾಜ್ಯಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪಿಥೋರ್ಗಢ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.
ಸಂಜೆ 4.38ರ ವೇಳೆಗೆ ಭೂಕಂಪ ಸಂಭವಿಸಿದ್ದು, ಪಿಥೋರ್ಗಢದ ಉತ್ತರ-ಈಶಾನ್ಯ ಭಾಗಕ್ಕೆ 33 ಕಿಲೋ ಮೀಟರ್ ದೂರದಲ್ಲಿ ಭೂಮಿಯ 8 ಕಿಲೋ ಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.