ನವದೆಹಲಿ:ಭಾರತ, ನೇಪಾಳದಲ್ಲಿ ಸರಣಿ ಭೂಕಂಪನ ಸಂಭವಿಸಿದೆ. ಉತ್ತರಾಖಂಡದ ರಿಷಿಕೇಶದಲ್ಲಿ 3.4 ಪ್ರಮಾಣದ ಭೂಕಂಪನ ಸಂಭವಿಸಿದ ಬಳಿಕ, ದೆಹಲಿಯಲ್ಲೂ ಭೂಮಿ ನಡುಗಿದೆ. ನೇಪಾಳದಲ್ಲಿ 5.4 ನಷ್ಟು ಬಲವಾದ ನಡುಕ ಉಂಟಾಗಿದೆ. ನೇಪಾಳದಲ್ಲಿ 7.57 ನಿಮಿಷಕ್ಕೆ ಭೂಮಿ ಅಲುಗಾಡಿದರೆ, ದೆಹಲಿಯಲ್ಲಿ 7.59 ರ ಸುಮಾರಿನಲ್ಲಿ ದಾಖಲಾಗಿದೆ.
ದೆಹಲಿಗೆ ವಾರದಲ್ಲಿ ಎರಡನೇ ಎಫೆಕ್ಟ್:ದೆಹಲಿ ನಿವಾಸಿಗಳಿಗೆ ಪ್ರಕೃತಿ ವಾರದಲ್ಲಿ ಎರಡನೇ ಬಾರಿಗೆ ಶಾಕ್ ನೀಡಿದೆ. ನವೆಂಬರ್ 16 ರಂದು ನೇಪಾಳದಲ್ಲಿ 6.3 ರಷ್ಟು ಪ್ರಬಲ ಭೂಕಂಪನ ಸಂಭವಿಸಿ ಭಾರಿ ನಷ್ಟ ಉಂಟು ಮಾಡಿತ್ತು. ಇದರ ಪ್ರಭಾವ ದೆಹಲಿಯಲ್ಲಿ ಕಾಣಿಸಿಕೊಂಡು, ಇಲ್ಲಿಯೂ ಧರೆ ನಡುಗಿತ್ತು. ಇಂದು ಮತ್ತೆ ರಾತ್ರಿ 7.59 ಗಂಟೆ ಸುಮಾರಿಗೆ ಧಾತ್ರಿ ಕಂಪಿಸಿದೆ.
ನಡುಗಿದ ಅನುಭವವಾದಾಗ ತಕ್ಷಣ ಜನರು ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 30 ರಿಂದ 40 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಇದರ ಪ್ರಮಾಣ ಎಷ್ಟಿತ್ತು ಎಂಬುದು ತಕ್ಷಣಕ್ಕೆ ತಿಳಿದು ಬಂದಿಲ್ಲ. ಅಲ್ಲದೇ, ಯಾವುದೇ ಸಾವು ನೋವಿನ ಬಗ್ಗೆಯೂ ವರದಿಯಾಗಿಲ್ಲ.