ಥೆನ್ಜಾಲ್ (ಮಿಜೋರಾಂ): ಶುಕ್ರವಾರ ಮುಂಜಾನೆ ಮಿಜೋರಾಂನ ಥೆನ್ಜಾಲ್‌ನ ಆಗ್ನೇಯ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ಮಾಹಿತಿ ನೀಡಿದೆ.
ಎನ್‌ಸಿಎಸ್ ಪ್ರಕಾರ, ಭೂಕಂಪದ ಕಂಪನಗಳು 12 ಕಿಲೋಮೀಟರ್ ಆಳವನ್ನು ಹೊಂದಿದ್ದು, ಬೆಳಗ್ಗೆ 5.15 ರ ಸುಮಾರಿಗೆ ಸಂಭವಿಸಿದೆ. ಭೂಕಂಪನ ಪರಿಣಾಮ ಹೆಚ್ಚಾಗಿ ಕೋಲ್ಕತ್ತಾ ಮತ್ತು ಬಾಂಗ್ಲಾದೇಶ ಮೇಲೆ ಬೀರಿದೆ.