ಗುಜರಾತ್:ಸೌರಾಷ್ಟ್ರ ಭಾಗದಲ್ಲಿ ಭೂಮಿ ಕಂಪಿಸಿದ್ದು, 4.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.
ಗುಜರಾತ್‌ನ ಕೆಲ ಭಾಗಗಳಲ್ಲಿ ಲಘು ಭೂಕಂಪನ ಅನುಭವ - ಗುಜರಾತ್ ಭೂಕಂಪ
ಗುಜರಾತ್‌ನ ಕೆಲ ಭಾಗದಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಸೌರಾಷ್ಟ್ರ ಭಾಗದಲ್ಲಿ ಭೂಮಿ ಕಂಪಿಸಿದ್ದು, 4.5ರಷ್ಟು ತೀವ್ರತೆ ದಾಖಲಾಗಿದೆ.
ಉನಾ ಮತ್ತು ರಜುಲಾ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಗಿರ್ ಸೋಮನಾಥ್ ಜಿಲ್ಲೆಯ ಉನಾ ನಗರಕ್ಕಿಂತ 3.5 ಕಿ.ಮೀ ದೂರದಲ್ಲಿ ಇಂದು ಮುಂಜಾನೆ 3.37ರ ಸಂದರ್ಭದಲ್ಲಿ ಭೂಕಂಪನ ಉಂಟಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಕೆಲ ಕಡೆಗಳಲ್ಲಿ ಕಿಟಕಿ ಗಾಜುಗಳು ಪುಡಿಯಾಗಿದ್ದು ಸಣ್ಣ ಪುಟ್ಟ ಹಾನಿಯುಂಟಾಗಿದೆ ಎಂದು ವರದಿಯಾಗಿದೆ. ಗಿರ್ ಸೋಮ್‌ನಾಥ್ ಜಿಲ್ಲಾಧಿಕಾರಿ ಅಜಯ್ ಪ್ರಕಾಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಗುಜರಾತ್‌ನ ರಾಜ್‌ಕೋಟ್ ಸಮೀಪ 4.8ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇನ್ನು ತೌಕ್ತೆ ಚಂಡಮಾರುತ ಪಶ್ಚಿಮ ಕರಾವಳಿ ರಾಜ್ಯಗಳಲ್ಲಿ ಈಗಾಗಲೇ ಹಾನಿಯುಂಟು ಮಾಡಿದೆ. ಕೇರಳ ಕರ್ನಾಟಕದಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಇನ್ನು ಮೇ.18ರ ವೇಳೆಗೆ ಗುಜರಾತ್ ಪ್ರವೇಶಿಸುವ ತೌಕ್ತೆ ಎಷ್ಟರ ಮಟ್ಟಿಗೆ ಸಂಕಷ್ಟ ತಂದಿಡುತ್ತದೆಯೋ ಎಂದು ಜನರು ಆತಂಕ ಪಡುತ್ತಿದ್ದಾರೆ.